Asianet Suvarna News Asianet Suvarna News

ಕಿತಾಪತಿ ಮಾಡಿದವನ ಕೆನ್ನೆಗೆ ಬಿಸಿಬಿಸಿ ಕಜ್ಜಾಯ ಕೊಟ್ಟ ಮಂಡ್ಯದ ಹೆಣ್ಣು! ವಿಡಿಯೋ

ಯುವತಿಯೊಂದಿಗೆ ಪುಂಟಾಟ ನಡೆಸಿದವನಿಗೆ ಬಿತ್ತು ಗೂಸಾ/ ಹಿಡಿದು ಕೆನ್ನೆಗೆ ಪಟಪಟನೆ ಬಾರಿಸಿದ ಹುಡುಗಿ/ ಮಂಡ್ಯ ಬಸ್ ನಿಲ್ದಾಣದಲ್ಲಿ ಘಟನೆ

ಮಂಡ್ಯ (ಜು. 30) ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡವನಿಗೆ ಮಂಡ್ಯದ ದಿಟ್ಟ ಹುಡುಗು ಸರಿಯಾಗಿಯೇ ಗೂಸಾ ನೀಡಿದ್ದಾರೆ. ಹೆಣ್ಣು ಮಕ್ಕಳೊಂದಿಗೆ ಯಾಕೆ ಹೀಗೆ ಮಾಡುತ್ತೀಯಾ ಎಂದು ಕೆನ್ನೆಗೆ ಪಟಪಟನೆ ಬಾರಿಸಿದ್ದಾರೆ.

ವಿಡಿಯೋ ಗೇಮಿಂಗ್ ಕಂಪನಿಯ ಅವತಾರ, ಪುರುಷರ ಜನನೇಂದ್ರಿಯ ಮುಟ್ಟೋದು ಒಂದು ಒಂದು ಆಟ!

ಮಂಡ್ಯ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಕೀಟಲೆ ಕೊಟ್ಟ ವ್ಯಕ್ತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತನ್ನ ಮೇಲೆ ದೌರ್ಜನ್ಯ ಮಾಡಲು ಬಂದವನಿಗೆ ಯುವತಿಯೇ ಸರಿಯಾಗಿ ಬಾರಿಸಿದ್ದಾರೆ.