Asianet Suvarna News Asianet Suvarna News

ರಾತ್ರಿ ವೇಳೆ ಸ್ತ್ರೀಯೊಬ್ಬಳ ಮೇಲೆ ಅಮಾನುಷ ದೌರ್ಜನ್ಯ, ಯಾದಗಿರಿಯ ವಿಡಿಯೋ ವೈರಲ್‌

Sep 13, 2021, 11:49 AM IST

ಯಾದಗಿರಿ(ಸೆ.13): ಮಹಿಳೆಯೊಬ್ಬಳನ್ನು ಸಂಪೂರ್ಣ ಬೆತ್ತಲಾಗಿಸಿದ ಗುಂಪೊಂದು ಆಕೆಯ ಮೇಲೆ ಕಬ್ಬಿನ ಜಲ್ಲೆಗಳಿಂದ ತೀವ್ರವಾಗಿ ಹಲ್ಲೆ ನಡೆಸುವುದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಗಾಂಗಗಳನ್ನು ಮುಟ್ಟಿಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯಾದಗಿರಿ ಸಮೀಪದಲ್ಲಿ ನಡೆದಿದೆ ಎನ್ನಲಾದ ಈ ಪೈಶಾಚಿಕ ಕೃತ್ಯ ನಿರ್ದಿಷ್ಟವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.

ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಮಹಿಳೆಯರ ಮೇಲೆ ಇಂತಹ ಮೃಗೀಯ ವರ್ತನೆಗಳು ನಡೆಯುವುದು ಕೆಲವೊಮ್ಮೆ ವರದಿಯಾಗುತ್ತಿದ್ದವು. ಆದರೆ, ಈ ಹೇಯ ಕೃತ್ಯವೀಗ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಆದರೆ, ಇಂತಹ ಘಟನೆ ನಡೆದ ಬಗ್ಗೆ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಯಾರೂ ದೂರು ನೀಡಿದ ಬಗ್ಗೆ ತಿಳಿದುಬಂದಿಲ್ಲ.

Video Top Stories