ಬಾಣಂತನಕ್ಕೆ ಬಂದವಳು ಹೆಣವಾಗಿ ಹೋದಳು.. ಮಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಾಯಿ..!

ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಣಂತಿಯ ಮೃತದೇಹ  ಪ್ರಕರಣದಲ್ಲಿ ಮೃತ ಮಹಿಳೆಯ  ತಾಯಿ ಮತ್ತು ತಮ್ಮನನ್ನು  ಪೊಲೀಸರು ಬಂಧಿಸಿದ್ದಾರೆ.  

First Published Mar 28, 2023, 2:30 PM IST | Last Updated Mar 28, 2023, 2:30 PM IST

ಕೊಪ್ಪಳ  ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಬಾಣಂತಿಯನ್ನು ಕೊಲೆಮಾಡಿ ಸುಟ್ಟುಹಾಕಿದ್ದರು.  ಯುಗಾದಿ ಹಿಂದಿನ ದಿನ ಅಮಾವಾಸ್ಯೆ ದಿನ ಕೃತ್ಯ ನಡೆದಿದ್ದು,  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಹಲವು ಅನುಮಾನಗಳು ಎದುರಾಗಿದ್ದು, ಪ್ರಕರಣ ಜಾಡು ಹಿಡಿದು ಹೊರಟ ಖಾಕಿ ಪಡೆಗೆ ಅಚ್ಚರಿ ಕಾದಿತ್ತು.ಮೃತ ಮಹಿಳೆಯ ತಾಯಿ ಕನಕಮ್ಮ ಹಾಗೂ ತಮ್ಮ ಮಾರುತಿಯೇ ಕೊಲೆಗಾರರು ಎಂದು ತಿಳಿದು ಬಂದಿತ್ತು. ಈ ವೇಳೆ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಆಸ್ಪತ್ರೆಯ ಹೆರಿಗೆ ಖರ್ಚು, ಬಂಗಾರ ಕೊಡಿಸುವ ವಿಷಯದಲ್ಲಿ ಜಗಳ ನಡೆದಿತ್ತು. ಈ ಜಗಳವೇ ಅತಿರೇಕಕ್ಕೆ ತಿರುಗಿ ನೇತ್ರಾವತಿಯನ್ನು ಕೊಲೆ ಮಾಡಿದ್ದಾರೆ ತಿಳಿದು ಬಂದಿದೆ.