Asianet Suvarna News Asianet Suvarna News

Fraud Case: ಡೆತ್ ಸರ್ಫಿಕೇಟ್ ಬೇಕು ಅಂದ್ರೆ 2 ಸಾವಿರ ಕೊಡ್ಬೇಕಂತೆ, ಶವ ಮುಂದಿಟ್ಟು ವಸೂಲಿ!

ಈತ ಹೆಣಗಳ ಮೇಲೆ ದುಡ್ಡು ಮಾಡುವ ಮಹಾ ಭ್ರಷ್ಟ. ಕೊರೋನಾ ವೇಳೆ ಶವ ಸಂಸ್ಕಾರಕ್ಕೆ ಬಂದವರೇ ಇವನ ಟಾರ್ಗೆಟ್. ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ಸಿಬ್ಬಂದಿ ಸುಬ್ರಮಣಿ ಶವ ಮುಂದಿಟ್ಟು, ಹಣ ವಸೂಲಿ ಮಾಡುತ್ತಿದ್ದ. ಈತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಬೆಂಗಳೂರು (ಡಿ. 07): ಈತ ಹೆಣಗಳ ಮೇಲೆ ದುಡ್ಡು ಮಾಡುವ ಮಹಾ ಭ್ರಷ್ಟ. ಕೊರೋನಾ ವೇಳೆ (Covid 19) ಶವ ಸಂಸ್ಕಾರಕ್ಕೆ ಬಂದವರೇ ಇವನ ಟಾರ್ಗೆಟ್. ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ಸಿಬ್ಬಂದಿ ಶವ ಮುಂದಿಟ್ಟು, ಹಣ ವಸೂಲಿ ಮಾಡುತ್ತಿದ್ದ. ಈತನ ಸುಬ್ರಮಣಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. 

Omicron Threat: ಕಾಸು ಕೊಟ್ರೆ ನೋ ಚೆಕ್ಕಿಂಗ್, ನೋ ನೆಗೆಟಿವ್ ರಿಪೋರ್ಟ್, ಚೆಕ್‌ಪೋಸ್ಟ್‌ಗಳಲ್ಲಿ ದಂಧೆ

 ಡೆತ್ ಸರ್ಟಿಫಿಕೇಟ್ (Death Certificate) ಬೇಕು ಅಂದ್ರೆ 2 ಸಾವಿರ ಕೊಡಿ ಎನ್ನುತ್ತಿದ್ದ. 2 ಸಾವಿರ ಕೊಟ್ಟರೆ, ಸರ್ಫಿಫಿಕೇಟ್ ಕೊಡುವ ಬದಲು ಇನ್ನಷ್ಟು ಆಟ ಆಡಿಸುತ್ತಿದ್ದ. ಕುಟುಂಬದವರನ್ನು, ಹತ್ತಿರದವರನ್ನು ಕಳೆದುಕೊಂಡು ದುಃಖದಲ್ಲಿರುವ ಮಂದಿಗೆ ಈತನ ಹಣದಾಹ ಇನ್ನಷ್ಟು ನೋವುಂಟು ಮಾಡಿದೆ. ಈತನ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿದೆ. ಇದೀಗ ಎಫ್‌ಐಆರ್ ದಾಖಲಾಗಿದೆ. 

 

 

Video Top Stories