Asianet Suvarna News Asianet Suvarna News

ರೀಲ್‌ ಬೇರೆ..ರಿಯಲ್‌ ಲೈಫ್‌ ಬೇರೆ... ಸಿನಿಮಾ ಸ್ಫೂರ್ತಿಯಿಂದ ಕೊಲೆ ಮಾಡಿದ್ರೆ ಜೈಲು ಪಾಲೇ!

ಎಂಥದ್ದೇ ಕೊಲೆ ಮಾಡಿದ್ರೂ ಬಚಾವ್‌ ಆಗುವುದು ಸಿನಿಮಾಗಳಲ್ಲಿ ಮಾತ್ರ. ಇಂಥ ಸಿನಿಮಾಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಕೊಲೆ ಮಾಡೋಕೆ ಇಳಿದ್ರೆ ಜೈಲಲ್ಲಿ ಮುದ್ದೆ ಮುರಿಯೋದು ಗ್ಯಾರಂಟಿ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಮಗಳು, ಮಗಳ ಗೆಳೆಯನ ಜೊತೆ ಸೇರಿ ಸ್ವಂತ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿ ಇಂದು ಜೈಲು ಪಾಲಾಗಿದ್ದಾರೆ.

Oct 2, 2022, 10:06 PM IST

ಬೆಳಗಾವಿ  (ಅ.2): ಅದೊಂದು ಪಕ್ಕಾ ಸಿನಿಮಾ ಸ್ಟೈಲ್‌ನಲ್ಲಿ ನಡೆದ ಕ್ರೈಂ.  ತಂದೆಯನ್ನು ಮುಗಿಸಲು ಪ್ರಿಯಕರನೊಂದಿಗೆ ಮಗಳು ಸ್ಕೆಚ್ ಹಾಕಿದ್ರೆ ಅಲ್ಲಿ ಗಂಡನ ಕೊಲೆಗೆ ಸಾಥ್ ಕೊಟ್ಟಿದ್ದಳು ಹೆಂಡತಿ.  ಮನೆ ಯಜಮಾನನಿಗೆ ತಾಯಿ ಮಗಳು ಸೇರಿ ಮುಹೂರ್ತ ಇಟ್ಟಿದ್ದರು. 

ಮಗಳು, ಮಗಳ ಪ್ರಿಯಕರ, ಪತ್ನಿ ಜೊತೆಗೂಡಿ  ಹತ್ಯೆಗೈದು ಸಾಕ್ಷಿ ನಾಶಕ್ಕೆ ನೋಡಿದ ಸಿನಿಮಾ ಯಾವುದು ಗೊತ್ತಾ? ದೃಶ್ಯ. ಆದರೆ, ದೃಶ್ಯ ಸಿನಿಮಾದ ಕ್ಲೈಮ್ಯಾಕ್ಸೇ ಬೇರೆ ಇಲ್ಲಿನ ಕ್ಲೈಮ್ಯಾಕ್ಸೇ ಬೇರೆಯಾಗಿತ್ತು. ಯಾಕೆಂದರೆ ಅದು ಸಿನಿಮಾ, ಇದು ರಿಯಲ್‌ ಲೈಫ್‌. ನಾಯಿ ಮತ್ತು ಅಕ್ಕಪಕ್ಕದವರು ನೀಡಿದ ಅದೊಂದು ಸುಳಿವು ಆರೋಪಿಗಳನ್ನ ಜೈಲಿಗಟ್ಟುವಂತೆ ಮಾಡಿದೆ. ಹೀಗೆ ಸಿನಿಮಾ ನೋಡಿಕೊಂಡು ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮನೆಯ ಯಜಮಾನನ್ನ ಮುಗಿಸಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಈ ಮೂವರು ಖತರ್ನಾಕ್ ಐಡಿಯಾ ಮಾಡಿದ್ದರು.

ಬೆಳಗಾವಿ: ತಾಯಿ, ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಂದ ಪುತ್ರಿ

ಸುಧೀರ್ ಮರ್ಡರ್ ಕೇಸ್ ತನಿಖೆಗಿಳಿದಿದ್ದ ಪೊಲೀಸರು, ಅಕ್ಷಯ್ ಅನ್ನೋನನ್ನ ಪುಣೆಯಲ್ಲಿ ವಶಕ್ಕೆ ಪಡೆದು ಬೆಳಗಾವಿಗೆ  ಕರೆತರುತ್ತಾರೆ. ನಂತರ ಅವನನ್ನ ತೀವ್ರ ವಿಚಾರಣೆ ನಡೆಸುತ್ತಾರೆ. ಅವನ ಮೊಬೈಲ್ ಪರಿಶೀಲನೆ ಮಾಡಿದಾಗ, ಆತ  ಕೊಲೆಯಾದ ಸುಧೀರ್ ಮೊದಲ ಮಗಳು ಸ್ನೇಹಾಗೆ ನಿರಂತರವಾಗಿ ಕರೆ ಮಾಡಿರೋದು ಗೊತ್ತಾಗುತ್ತೆ.  ಅಕ್ಷಯ್ ನನ್ನ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಆತ  ಸ್ನೇಹಾಳ ಪ್ರಿಯಕರ ಅನ್ನೋದು ಗೊತ್ತಾಗುತ್ತೆ.