Asianet Suvarna News Asianet Suvarna News

ಆಸ್ಪತ್ರೆ ಸಿಬ್ಬಂದಿ ಯಡವಟ್ಟು; 2 ದಿನದ ಕಂದಮ್ಮನನ್ನು ಕಳೆದುಕೊಂಡ ಪೋಷಕರು!

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಪೋಷಕರು ಮಗುವನ್ನು ಕಳೆದುಕೊಂಡಿದ್ದಾರೆ.

ಬೆಂಗಳೂರು (ನ. 20): ಇಲ್ಲಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಪೋಷಕರು ಮಗುವನ್ನು ಕಳೆದುಕೊಂಡಿದ್ದಾರೆ.

ವಕ್ಫ್ ಹಾಗೂ ಅಲ್ಪ ಸಂಖ್ಯಾತ ಇಲಾಖೆಯಲ್ಲಿ ನಡೆದಿದೆ ಭಾರೀ ಭ್ರಷ್ಟಾಚಾರ; ಹಿಂದಿನ ರುವಾರಿ ಇವರೇ!

ನ. 9 ರಂದು ಅಬ್ದುಲ್ ದಂಪತಿಗೆ ಹೆಣ್ಣು ಮಗುವಾಗಿತ್ತು. ನ. 11 ರಂದು ಮಗುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು ಚಿಕಿತ್ಸೆ ನೀಡಲಾಗುತ್ತಿತ್ತು. ಮಗುವನ್ನು ಅಮ್ಮನ ಬಳಿ ಕರೆದುಕೊಂಡು ಹೋಗುತ್ತೇನೆಂದು ಮಹಿಳೆಯೊಬ್ಬಳು ಕರೆದುಕೊಂಡು ಹೋಗಿದ್ದಾಳೆ. ಆಕೆ ಯಾರು , ಏನು ಎಂದು ತಿಳಿಯದೇ ಆಕೆಯ ಬಳಿ ಮಗು ಕೊಟ್ಟು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು ಈ ಪ್ರಮಾದಕ್ಕೆ ಕಾರಣವಾಗಿದೆ.