Asianet Suvarna News Asianet Suvarna News

ಉಡುಪಿ ನಾಲ್ಕು ಕೊಲೆ ಪ್ರಕರಣ: ಮಹತ್ವದ ಮಾಹಿತಿ ಹಂಚಿಕೊಂಡ ಎಸ್‌ಪಿ ಅರುಣ್‌!

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಂಬಂಧಪಟ್ಟಂತೆ ಉಡುಪಿ ಎಸ್‌ಪಿ ಡಾ.ಅರುಣ್‌ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿಗಳನ್ನು ತಿಳಿಸಿದ್ದಾರೆ.

ಉಡುಪಿ (ನ.15): ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಕುರಿತು ಇದೀಗ ಉಡುಪಿ ಎಸ್​ಪಿ ಡಾ. ಅರುಣ್‌ ಕೆಲವು ಸತ್ಯಾಂಶ ಬಹಿರಂಗಪಡಿದಿದ್ದಾರೆ.

ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿತ್ತು. ಟೆಕ್ನಿಕಲ್‌ ಎವಿಡೆನ್ಸ್‌ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬೆಳಗಾವಿಯಲ್ಲಿ ಬಂಧಿಸಿದ್ದರು.  'ನಾಲ್ವರ ಹತ್ಯೆಯನ್ನು ಮಾಡಿರುವುದಾಗಿ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಒಪ್ಪಿಕೊಂಡಿದ್ದಾರೆ. ಮೇಲ್ನೋಟಕ್ಕೆ ಹತ್ಯೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಯಿದೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಹೇಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಉಡುಪಿ ನಾಲ್ಕು ಕೊಲೆ ಪ್ರಕರಣ: ನರಹಂತಕ ಪ್ರವೀಣ್‌ ಚೌಗಲೆ ಖೆಡ್ಡಾಗೆ ಬಿದ್ದಿದ್ದು ಹೀಗೆ!

‘ಸ್ನೇಹ, ಸಲುಗೆ, ಪ್ರೇಮ ಮತ್ತು ಹಣದ ವಿಚಾರದಿಂದ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಮದುವೆಯಾಗಿ ಮಕ್ಕಳಾಗಿದ್ರು ಅಯ್ನಾಸ್ ಮೇಲೆ ಆರೋಪಿಗೆ ಲವ್ ಆಗಿತ್ತು. ಆಯ್ನಾಸ್ ಕೂಡ ಪ್ರವೀಣ್ ಜೊತೆ ಸಲುಗೆಯಿಂದ ಇದ್ದಳು. ಈ ವಿಚಾರವನ್ನು ಅಯ್ನಾಸ್‌ ಲೈಟ್ ಆಗಿ ಸ್ವೀಕರಿಸದ್ದರೆ, ಆರೋಪಿ ಪ್ರವೀಣ್ ಮಾತ್ರ ತನ್ನ ಪ್ರೀತಿಯನ್ನು ಗಂಭೀರವಾಗಿ ಪರಿಣಗಣಿಸಿದ್ದ ಎಂದು ಎಸ್‌ಪಿ ಹೇಳಿದ್ದಾರೆ.
 

Video Top Stories