Asianet Suvarna News Asianet Suvarna News

9 ತಿಂಗಳ ಹಿಂದಿನ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌, ಗೋಕಾಕಿನ ಮಂಜುನಾಥ್ ನಿಜವಾದ ಹಂತಕ ಯಾರು?

ಮಂಜುನಾಥನ ಕೊಲೆಗೂ ನಮಗೂ ಏನೂ ಸಂಬಂಧವೇ ಇಲ್ಲ, 15 ಲಕ್ಷ ಪಡೆದ್ರೂ ನಮಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಈ ಕುಟುಂಬ ಹೇಳ್ತಿದೆ. ಆದ್ರೆ ಹೀಗೆ ಇವರು ಹೇಳ್ತಿದ್ದಂತೆ ಅತ್ತ ಮಂಜುನಾಥನ ಅಕ್ಕ ಒಂದು ಪ್ರೆಸ್ ಮೀಟ್ ಮಾಡಿಬಿಟ್ಟಳು. ಆ ಪ್ರೆಸ್ ಮೀಟ್ನಲ್ಲಿ ಒಂದು ಸಾಕ್ಷಿಯೊಂದನ್ನ ಜಗತ್ತಿಗೆ ತೋರಿಸಿದ್ರು. 

ಬೆಂಗಳೂರು (ಏ.30): ಬೆಳಗಾವಿ (Belgavi) ಜಿಲ್ಲೆಯ ಗೋಕಾಕ್ ನಲ್ಲಿ (Gokak) 9 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ (Murder Case). 2021ರ ಜುಲೈನಲ್ಲಿ ಸುವರ್ಣ ಎಫ್ಐಆರ್ ನಲ್ಲಿ ಈ ಮರ್ಡರ್ ಕುರಿತಾಗಿ ವಿಸ್ತ್ರತವಾಗಿ ಸುದ್ದಿ ಪ್ರಸಾರವಾಗಿತ್ತು. ಈ ಮರ್ಡರ್ ಪ್ರಕರಣಕ್ಕೆ 9 ತಿಂಗಳ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ.  ಕೊಲೆ ಆರೋಪಿಗಳು ಜೈಲಿನಲ್ಲಿರುವಾಗಲೇ ಆರೋಪಿಗಳ ಕುಟುಂಬ ಒಂದು ಹೊಸ ಬಾಂಬ್ ಹಾಕಿದೆ. ಅಷ್ಟೇ ಅಲ್ಲ ಆರೋಪಿಗಳ ವಿರುದ್ಧವಾಗಿ ಕೊಲೆಯಾದ ಯುವಕನ ಮನೆಯವರು ಕೂಡ ಒಂದು ಸ್ಟ್ರಾಂಗ್ ಎವಿಡೆನ್ಸ್ ಹಿಡಿದುಕೊಂಡು ನಮ್ಮ ಮುಂದೆ ಬಂದಿದ್ದಾರೆ. 

ಅಂದು ಪೊಲೀಸರು ಪಕ್ಕಾ ತನಿಖೆ ಮಾಡಿ ಯುವತಿಯ ಸೋದರ ಮಾವಂದಿರು ಮತ್ತು ಅಜ್ಜನನ್ನ ಬಂಧನ ಮಾಡಿದ್ದರು. ಎಲ್ಲಾ ಮುಗೀತು ಈ ಆರೋಪಿಗಳೇ ಕೊಲೆಗಾರರು ಅವರಿಗೆ ತಕ್ಕ ಶಿಕ್ಷೆಯಾಗುತ್ತೆ ಅನ್ನೋವಾಗಲೇ ಕೇಸ್ ಗೆ  ದೊಡ್ಡ ಟ್ವಿಸ್ಟ್ ಸಿಕ್ಕಿದೆ. 

Gokak Murder Case: 9 ತಿಂಗಳ ಹಿಂದಿನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್‌..!

ಅವತ್ತು ಮಂಜುನಾಥನ (Manjunath) ಕೇಸ್ ನಲ್ಲಿ ಮೂವರನ್ನ ಎತ್ತಾಕೊಂಡು ಹೋಗಿದ್ದ ಪೊಲೀಸರು ಜೈಲಿಗೆ ಬಿಟ್ಟು ಬಂದಿದ್ರು. ಇದೆಲ್ಲಾ ಆಗಿ 9 ತಿಂಗಳಾಗಿದೆ. ಆದರೆ ಈಗ ಆರೋಪಿ ಮನೆ ಕಡೆಯವರು ಹೊಸ ತಗಾದೆ ತಗೆದಿದ್ದಾರೆ. ನಮ್ಮ ಮನೆಯವರು ಕೊಲೆ ಮಾಡಿಯೇ ಇಲ್ಲ ಅಂತಿದ್ದಾರೆ.  ದುಡ್ಡು ಪಡೆದು ನಮಗೆ ಮೋಸ ಮಾಡ್ತಿದ್ದಾರೆ ಅಂತಿದ್ದಾರೆ. ಆದರೆ ಇದೆಲ್ಲಾ ಶುರುವಾಗಿದ್ದು ಮೊದಲ ಆರೋಪಿ ಸಿದ್ದಪ್ಪ ಬಬೂಲಿ ಜಾಮಿನಿನ ಮೇಲೆ ಹೊರಬಂದಾಗ ಎನ್ನುವುದು ಅಚ್ಚರಿ ತಂದಿರುವ ವಿಚಾರ.