ರಾಜ್ಯದಲ್ಲಿ 2 ಕಡೆ ಎನ್‌ಐಎ ದಾಳಿ: ಮೂವರು ಶಂಕಿತ ಉಗ್ರರು ವಶಕ್ಕೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ತುಮಕೂರಲ್ಲಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದ ಎನ್‌ಐಎ

First Published Jul 31, 2022, 3:56 PM IST | Last Updated Jul 31, 2022, 3:56 PM IST

ಭಟ್ಕಳ/ತುಮಕೂರು(ಜು.31):  ರಾಜ್ಯದಲ್ಲಿ ಮತ್ತೆ ಆಕ್ಟಿವ್‌ ಆದ್ರಾ ಉಗ್ರರು?, ಉಗ್ರರ ಸ್ಲೀಪರ್‌ ಸೆಲ್‌ ಆಗ್ತಾ ಇದೆಯಾ ಕರ್ನಾಟಕ? ಅನ್ನುವಂತ ಪ್ರಶ್ನೆಗಳು ಇದೀಗ ಮೂಡುತ್ತಿವೆ. ಇಂದು(ಭಾನುವಾರ) ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ತುಮಕೂರಿನಲ್ಲಿ ಎನ್‌ಐಎ ದಾಳಿ ನಡೆಸಿದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಇಂದು ಬೆಳಿಗ್ಗೆ 4.15 ಸುಮಾರಿಗೆ ಭಟ್ಕಳದಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನ ವಶಕ್ಕೆ ಪಡೆಯಲಾಗಿದೆ. ದೆಹಲಿ ಹಾಗೂ ಬೆಂಗಳೂರು ಎನ್‌ಐಎ ತಂಡದಿಂದ ದಾಳಿ ಮಾಡಲಾಗಿದೆ. ಇನ್ನು ತುಮಕೂರಿನಲ್ಲಿ ಎನ್‌ಐಎ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. 

ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

Video Top Stories