ಹಿಟ್‌ & ರನ್‌ನಲ್ಲಿ ಬೈಕ್‌ ಸವಾರ ಸಾವು: ಪ್ರತಿಷ್ಠಿತ ಉದ್ಯಮಿ ಪುತ್ರನ ರಕ್ಷಣೆಗೆ ನಿಂತ್ರಾ ಹುಬ್ಬಳ್ಳಿ ಪೊಲೀಸರು?

ಹುಬ್ಬಳ್ಳಿಯಲ್ಲಿ ಬೈಕ್‌-ಕಾರಿನ ನಡುವೆ ಭೀಕರ ಅಪಘಾತವಾಗಿದ್ದು, ಪ್ರತಿಷ್ಠಿತ ಉದ್ಯಮಿ ಪುತ್ರನಿಂದ ಹಿಟ್‌ & ರನ್‌ ಆಗಿದ್ದು, ಅಪಘಾತದಲ್ಲಿ ಬೈಕ್ ಸವಾರ ಗಣೇಶ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕಳೆದ ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಹುಣಕಲ್ ಸಮೀಪ ಸಿದ್ದೇಶ್ವರ ಸರ್ಕಲ್‌ನಲ್ಲಿ ಆಕ್ಸಿಡೆಂಟ್ ಸಂಭವಿಸಿದೆ. 

First Published Sep 29, 2022, 11:13 AM IST | Last Updated Sep 29, 2022, 11:13 AM IST

ಹುಬ್ಬಳ್ಳಿ (ಸೆ.29): ಹುಬ್ಬಳ್ಳಿಯಲ್ಲಿ ಬೈಕ್‌-ಕಾರಿನ ನಡುವೆ ಭೀಕರ ಅಪಘಾತವಾಗಿದ್ದು, ಪ್ರತಿಷ್ಠಿತ ಉದ್ಯಮಿ ಪುತ್ರನಿಂದ ಹಿಟ್‌ & ರನ್‌ ಆಗಿದ್ದು, ಅಪಘಾತದಲ್ಲಿ ಬೈಕ್ ಸವಾರ ಗಣೇಶ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕಳೆದ ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಹುಣಕಲ್ ಸಮೀಪ ಸಿದ್ದೇಶ್ವರ ಸರ್ಕಲ್‌ನಲ್ಲಿ ಆಕ್ಸಿಡೆಂಟ್ ಸಂಭವಿಸಿದೆ. ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸರೆಯಾಗಿತ್ತು. ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಮಿ ಪುತ್ರ ಪ್ರತೀಕ್ ಭಂಡಾರಿ ಆಕ್ಸಿಡೆಂಟ್ ಮಾಡಿ ಕಾರನ್ನು ಸ್ಥಳದಲ್ಲೇ  ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇನ್ನು ಅಪಘಾತದ ನಂತರ ಪ್ರತೀಕ್ ಕಾರನ್ನು ಬದಲಾಯಿಸಿದ್ದ. ಹುಬ್ಬಳ್ಳಿ ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನಲ್ಲಿ ಕಾರ್‌ ಡ್ರೈವರ್‌ನನ್ನು ಎ1 ಆರೋಪಿ ಎಂದು ಉಲ್ಲೇಖಿಸಲಾಗಿದೆ. ಹಾಗಿದ್ದರೆ ಪೊಲೀಸರಿಗೆ ಕಾರು ಚಾಲಕ ಯಾರು ಅನ್ನೋದೆ ಗೊತ್ತಿರಲಿಲ್ವಾ ಅಥವಾ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸುತ್ತಿದ್ದಾರಾ? ಸದ್ಯ ಅಮಾಯಕನ ಜೀವನನ್ನು ತೆಗೆದರೂ ಪೊಲೀಸರು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories