Asianet Suvarna News Asianet Suvarna News

ನಡು ಬೀದಿಯಲ್ಲಿ ತಲ್ವಾರ್ ಹಿಡಿದು ಡ್ಯಾನ್ಸ್ ... ಬೆಳಗಾವಿಯಲ್ಲಿ ಇದೇನು ಸಂಭ್ರಮ!

Oct 15, 2021, 10:18 PM IST

ಬೆಳಗಾವಿ(ಅ. 15)  ಹಿಂದುಪರ (Hindu) ಸಂಘಟನೆಯ ಕಾರ್ಯಕರ್ತರು ಹಾಡಹಗಲೇ ತಲ್ವಾರ್ ಹಿಡಿದು ಸಂಭ್ರಮಿಸಿದ್ದಾರೆ.  ಬೆಳಗಾವಿಯ(Belagavi) ಪೀರನವಾಡಿ  ಕ್ರಾಸ್ ಬಳಿ ಬ್ರಹ್ಮನಗರದ ಹನುಮಾನ ದೇವಸ್ಥಾನ ಬಳಿ ಈ ಸಂಭ್ರಮಾಚರಣೆ ನಡೆದಿದೆ.

ಗಣೇಶೋತ್ಸವದಲ್ಲಿ ಝಳಪಿಸಿದ ತಕ್ವಾರ್

ಕೈಯಲ್ಲಿ ತಲ್ವಾರ್ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿದೆ. ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಆಯುಧ ಪೂಜಾ ಕಾರ್ಯಕ್ರಮದ ವೇಳೆ ಈ ರೀತಿ ಸಂಭ್ರಮಾಚರಣೆ ಕಂಡುಬಂದಿದೆ. ಪೊಲೀಸರು ಯಾವ ಕ್ರಮ ತೆಗೆದುಕೊಂಡಿಲ್ಲ.