Asianet Suvarna News Asianet Suvarna News

ಶಿವರಾಜ್‌ ಕುಮಾರ್ ಏರಿಯಾಗೆ ಕಳ್ಳತನಕ್ಕೆ ಬಂದಿದ್ದು ಫಾರಿನ್‌ನಿಂದ..!

ಫಾರಿನ್‌ನಿಂದ ಬಂದ ಖತರ್‌ನಾಕ್‌ ಬೆಂಗಳೂರು ಪೊಲೀಸರನ್ನು ಕಂಗಾಲು ಮಾಡಿದ್ದರು. ಈ ಗ್ಯಾಂಗ್ ಖ್ಯಾತ ಸಿನೆಮಾ ನಟ ಶಿವರಾಜ್‌ಕುಮಾರ್ ಏರಿಯಾಗೂ ಎಂಟ್ರಿ ಕೊಟ್ಟಿದ್ದರು. ಈ ಗ್ಯಾಂf ದರೋಡೆ ಮಾಡುತ್ತಿದ್ದ ರೀತಿಯೇ ಬಲು ರೋಚಕ. ಕೊನೆಗೂ ಬೆಂಗಳೂರು ಪೊಲೀಸರು ಈ ಗ್ಯಾಂಗನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ. 

ಬೆಂಗಳೂರು(ಆ.01): ಅದೊಂದು ವೃತ್ತಿಪರ ದರೋಡೆಕೋರರು ಗುಂಪು. ಫಾರೀನ್‌ನಿಂದ ಕಳ್ಳತನ ಮಾಡೋಕೆ ಅಂತಾನೆ ಭಾರತಕ್ಕೆ ಬಂದಿಳಿದಿತ್ತು. ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಮನೆ ಪಕ್ಕದಲ್ಲಿಯೇ ಒಂದು ರಾಬರಿಯನ್ನು ಮಾಡಿ ಸೈ ಎನಿಸಿಕೊಂಡಿತ್ತು.

ಆದರೆ ಈ ಗ್ಯಾಂಗ್ ಅಲ್ಲಿ ಒಂದು ರುಪಾಯಿಯನ್ನು ಮುಟ್ಟಲ್ಲ. ಪಿಪಿಇ ಕಿಟ್ ಧರಿಸಿ ಸೈಕಲ್‌ನಲ್ಲಿ ಬರುವ ಈ ಗ್ಯಾಂಗ್ ಸಾಮಾನ್ಯ ದರೋಡೆಕೋರರಿಗಿಂತ ಸಾಕಷ್ಟು ಭಿನ್ನ. ಈ ಫಾರಿನ್ ದರೋಡೆಕೋರರ ಗ್ಯಾಂಗ್‌ನಲ್ಲಿ ಒಬ್ಬ ಸುಂದರಿಯೂ ಇದ್ದಳು.

ನಟ ದರ್ಶನ್‌ ಸಂಬಂಧಿ ಸೋಗಿನಲ್ಲಿ ಜನರಿಗೆ ವಂಚನೆ: ಕಿಡಿಗೇಡಿ ಬಂಧನ

ನನ್ನ ಸರ್ವೀಸ್‌ನಲ್ಲೇ ಇಂತಹದ್ದೊಂದು ಗ್ಯಾಂಗ್ ನೋಡಿರಲಿಲ್ಲ ಎಂದು ಬೆಂಗಳೂರಿನ ಪೊಲೀಸ್ ಕಮಿಷನರ್‌ ಆಗಿದ್ದ ಬಾಸ್ಕರ್ ಪ್ರಸಾದ್ ಇವರನ್ನು ಕಂಡು ಉದ್ಘರಿಸಿದ್ದರು. ಈ ಗ್ಯಾಂಗ್ ಕಳ್ಳತನವನ್ನು ಹೀಗೂ ಮಾಡಬಹುದಾ ಎಂದು ಪೊಲೀಸರನ್ನೇ ದಂಗು ಬಡಿಸಿತ್ತು. ಈ ಫಾರಿನ್‌ ಗ್ಯಾಂಗ್‌ನ ರೋಚಕ ಸ್ಟೋರಿ ಇಂದಿನ ಸುವರ್ಣ ಎಫ್‌ಐಆರ್‌ನಲ್ಲಿ...

Video Top Stories