Asianet Suvarna FIR ಹೆಣ್ಣು-ಗಂಡಿನ ಆಡಿಯೋ ಸ್ಫೋಟ, ಆ ಮೂರು ಸಾವಿನ ಹಿಂದಿನ ನಿಗೂಢ ರಹಸ್ಯಗಳು
ಮೃತ ಗೃಹಿಣಿ ಬೆಳಗಾವಿ ಸಹ್ಯಾದ್ರಿ ನಗರದ ನಿವಾಸಿಯಾಗಿದ್ದರು. ಕೊಲೆ-ಕೊಲೆ ಅಂತಿದ್ದ ಆ ಕೇಸ್‌ಗೊಂದು ಇಂಟ್ರಸ್ಟಿಂಗ್ ತಿರುವು ಕೊಟ್ಟಿದ್ದು ಆಡಿಯೋ ರೆಕಾರ್ಡ್. ಆ ಮೂರು ಸಾವಿನ ಹಿಂದಿನ ನಿಗೂಢ ರಹಸ್ಯಗಳು ಇವತ್ತಿನ ಎಫ್‌ಐಆರ್‌ನಲ್ಲಿ.
ಬೆಳಗಾವಿ, (ಫೆ.18): ಮಿರಜ್ ಮೂಲದ ಕೃಷಾ ಅವರನ್ನು ಬೆಳಗಾವಿ(Belagavi) ಸಹ್ಯಾದ್ರಿ ನಗರದಲ್ಲಿರುವ ಮನಿಷ್ ಎಂಬುವರೊಂದಿಗೆ 8 ವರ್ಷಗಳ ಹಿಂದೆ ಮದುವೆ(Marriage) ಮಾಡಿಕೊಡಲಾಗಿತ್ತು. ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮನಿಷ್ ಕೇಶ್ವಾನಿ ಅತ್ಯಂತ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು.
Belagavi: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಪ್ರಾಣಬಿಟ್ಟ ತಾಯಿ: ಕಾರಣ?
ಇಬ್ಬರು ಪುಟ್ಟ ಮಕ್ಕಳು ಜೊತೆಯಲ್ಲಿ ತಾಯಿ. ಎದುರಲ್ಲಿ ಕೆರೆ. ಪಕ್ಕದಲ್ಲಿ ಗಣಪತಿ ದೇವಸ್ಥಾನ. ನೋಡ ನೋಡುತ್ತಿದ್ದಂತೆಯೇ ಮಕ್ಕಳನ್ನ ನೀರಿಗೆ ತಳ್ಳಿದ ತಾಯಿ ತಾನೂ ಕೆರೆಗೆ ಹಾರಿದ್ದಾಳೆ. ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ನಗರದ ಹಿಂಡಲಗಾ ಗಣಪತಿ ಮಂದಿರದ ಬಳಿ ನಡೆದಿತ್ತು.ತಾಯಿ ಕೃಷಾ (36), ಮಗಳು ಭವಿರಾ (4) ಶವ ಪತ್ತೆಯಾಗಿದ್ದು, ಮಗ ವಿರೇನ್ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿತ್ತು,
ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಗೃಹಿಣಿ ಬೆಳಗಾವಿ ಸಹ್ಯಾದ್ರಿ ನಗರದ ನಿವಾಸಿಯಾಗಿದ್ದರು. ಕೊಲೆ-ಕೊಲೆ ಅಂತಿದ್ದ ಆ ಕೇಸ್‌ಗೊಂದು ಇಂಟ್ರಸ್ಟಿಂಗ್ ತಿರುವು ಕೊಟ್ಟಿದ್ದು ಆಡಿಯೋ ರೆಕಾರ್ಡ್. ಆ ಮೂರು ಸಾವಿನ ಹಿಂದಿನ ನಿಗೂಢ ರಹಸ್ಯಗಳು ಇವತ್ತಿನ ಎಫ್‌ಐಆರ್‌ನಲ್ಲಿ.