22 ವರ್ಷದವನಿಗೆ 48 ವರ್ಷದ ಆಂಟಿ ಮೇಲೆ ಮೋಹ: ಎಲ್ಲಾ ಮುಗಿದ ಮೇಲೆ ಅವಳನ್ನೇ ಮುಗಿಸಿಬಿಟ್ಟ!

ಈ ಪಿಕ್ ಅಪ್ ಮತ್ತು ಡ್ರಾಪ್ ಮಾಡ್ತಾ ಮಾಡ್ತಾನೇ ಅವರಿಬ್ಬರ ನಡುವೆ ಸ್ನೇಹ ಬೆಳದಿತ್ತು. ಒಂದು ವರ್ಷ ಇವರಿಬ್ಬರು ಆತ್ಮೀಯತೆಯಿಂದ ಇದ್ರು. ಆದ್ರೆ ಅದೇನಾಯ್ತೋ ಏನೋ ಕಳೆದ ಕೆಲ ದಿನಗಳಿಂದ ದೀಪಾ ಭೀಮರಾಯನನ್ನ ಅವಾಯ್ಡ್ ಮಾಡೋದಕ್ಕೆ ಶುರು ಮಾಡಿಬಿಟ್ಲು.

First Published Mar 11, 2023, 2:59 PM IST | Last Updated Mar 11, 2023, 2:59 PM IST

ಆಕೆ ತಮಿಳುನಾಡು ಮೂಲದವಳು. ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲಸಿರ್ತಾಳೆ. ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿದ್ದ ಆಕೆಗೆ ಕೈತುಂಬ ಸಂಬಳ ಆದ್ರೆ ಒಂಟಿ ಜೀವನ. 48 ವರ್ಷವಾದ್ರೂ ಆಕೆಗೆ ಮದುವೆಯಾಗಿರಲಿಲ್ಲ. ಒಬ್ಬಂಟಿಯಾಗಿದ್ದ ಅಕೆ ತಾನಾಯ್ತು ತನ್ನ ಆಫೀಸ್ ಆಯ್ತು ಅಂತ ಇರ್ತಾಳೆ. ಹೀಗಿರುವಾಗ್ಲೇ ಅವಳು ಇದ್ದಕ್ಕಿದ್ದಂತೆ ಮಿಸ್ಸಿಂಗ್. ಆಫೀಸ್ಗೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ಪೊಲೀಸ್ ಠಾಣೆಯಲ್ಲಿ ದೂರೂ ಕೂಡ ದಾಖಲಾಗುತ್ತೆ. ಆದ್ರೆ ಬರೊಬ್ಬರಿ 5 ದಿನಗಳ ನಂತರ ಆಕೆ ಸಿಗ್ತಾಳೆ. ಆದ್ರೆ ಜೀವಂತವಾಗಲ್ಲ ಹೆಣವಾಗಿ. ಅವಳನ್ನ ಕೊಂದು ನಿರ್ಜನ ಪ್ರದೇಶದಲ್ಲಿ ಎಸೆಯಲಾಗಿತ್ತು. ಒಂಟಿ ಮಹಿಳಯನ್ನ ಕೊಂದ ಈ ಕೇಸ್ ಪೊಲೀಸರಿಗೆ ಸವಾಲಾಗಿತ್ತು. ಆದ್ರೂ ಬೆಂಬಿಡದೇ ಈ ಕೇಸ್ನ ಬೇದಿಸಿದ್ದಾರೆ. ಹಾಗಾದ್ರೆ ಒಂಟಿ ಮಹಿಳೆಯನ್ನ ಕೊಂದವರ್ಯಾರು..? ಕೊಲೆ ಮಾಡಿದ್ದಾದ್ರೂ ಯಾಕೆ..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. 

ಹಿಂದು ಮುಂದು ಯಾರೂ ಇಲ್ಲ. ಶತೃಗಳಂತೂ ಇಲ್ವೇ ಇಲ್ಲ.. ಹೀಗಿದ್ರೂ ದೀಪಾಳನ್ನ ಅಷ್ಟು ಬರ್ಬರವಾಗಿ ಕೊಂದಿದಾದ್ರೂ ಯಾರು? ಈ ಪ್ರಶ್ನೆಯೊಂದಿಗೇ ಪೊಲೀಸರು ತನಿಖೆ ಆರಂಭಿಸಿದ್ರು. ಅವರು ದೂರದ ಸಂಬಂಧಿಗಳನ್ನೇ ಕರೆದು ಆಕೆ ಕೊನೆಯ ಬಾರಿಗೆ ಮನೆಯಿಂದ ಹೊರಟಿದ್ದು ಯಾವಾಗ ಯಾರ ಜೊತೆ ಅನ್ನೋದನ್ನೆಲ್ಲಾ ಪ್ರಶ್ನೆ ಮಾಡ್ತಾರೆ ಆಗಲೇ ನೋಡಿ ದೀಪಾ ಸಂಬಂದಿಕರು ಅವನೊಬ್ಬನ ಹೆಸರು ಹೇಳೋದು. ಭೀಮರಾಯ ದೀಪಾಳನ್ನ ಪಿಕ್ ಮಅಡಿಕೊಂಡು ಹೋಗಿ ಆಕೆಯ ಕಥೆಯನ್ನ ಮುಗಿಸಿದ್ದ. ಆದ್ರೆ ದೀಪಾಳನ್ನ ಈ ಭೀಮರಾಯ ಕೊಂದಿದಾರೂ ಯಾಕೆ? ಆ ಕಾರಣವನ್ನೂ ಆತ ಪೊಲೀಸರೆದುರು ಹೇಳಿದ್ದಾನೆ. ಅವನ ಒಂದು ಲವ್ ಸ್ಟೋರಿಯನ್ನ ಪೊಲೀಸರ ಮುಂದೆ ಎಳೆಎಳೆಯಾಗಿ ಬಾಯಬಿಟ್ಟಿದ್ದಾನೆ. ಅವನು ಕ್ಯಾಬ್ ಡ್ರೈವರ್. ಅವಳು ಅಕೌಂಟೆಂಟ್. ಡೈಲಿ ಆಕೆಯನ್ನ ಈತನೇ ಪಿಕ್ ಅಪ್ ಮತ್ತು ಡ್ರಾಪ್ ಮಾಡ್ತಿದ್ದ. 

ಈ ಪಿಕ್ ಅಪ್ ಮತ್ತು ಡ್ರಾಪ್ ಮಾಡ್ತಾ ಮಾಡ್ತಾನೇ ಅವರಿಬ್ಬರ ನಡುವೆ ಸ್ನೇಹ ಬೆಳದಿತ್ತು. ಒಂದು ವರ್ಷ ಇವರಿಬ್ಬರು ಆತ್ಮೀಯತೆಯಿಂದ ಇದ್ರು. ಆದ್ರೆ ಅದೇನಾಯ್ತೋ ಏನೋ ಕಳೆದ ಕೆಲ ದಿನಗಳಿಂದ ದೀಪಾ ಭೀಮರಾಯನನ್ನ ಅವಾಯ್ಡ್ ಮಾಡೋದಕ್ಕೆ ಶುರು ಮಾಡಿಬಿಟ್ಲು. ಅವನ ನಂಬರ್ನ ಲಾಕ್ ಮಾಡಿಬಿಟ್ಲು. ಇದು ಭೀಮರಾಯನ ಪಿತ್ತ ನೆತ್ತಿಗೇರಿಸಿಬಿಡ್ತು. ನನ್ನೇ ಬ್ಲಾಕ್ ಮಾಡ್ತೀಯ ಅಂತ ಅವಳಿಗೆ ಸ್ಕೆಚ್ ಹಾಕಿಬಿಟ್ಟ. ಅವನ ಕಾರ್ ತೆಗೆದುಕೊಂಡು ಸೀದಾ ಅವಳ ಮನೆ ಮುಂದೆ ಬಂದು ನಿಂತುಬಿಟ್ಟ. ಆಕೆಗೆ ಅದು ತನ್ನ ಕೊನೆಯ ಡ್ರೈವ್ ಅನ್ನೋದು ಗೊತ್ತಿಲ್ಲದೇ ಹೋಗಿ ಅವನ ಕಾರನಲ್ಲಿ ಕೂತುಬಿಟ್ಲು. ಈ ಕಾಲದಲ್ಲಿ ಯಾರನ್ನ ನಂಬೋದು ಯಾರನ್ನ ಬಿಡೋದು. ಹೋಗ್ಲೀ ಪಾಪ ಅಂತ ದೀಪಾ, ಭೀಮರಾಯನನ್ನ ಹತ್ತಿರಕ್ಕೆ ಬಿಟ್ಟುಕೊಂಡಳು. ಆದ್ರೆ ಅದನ್ನೇ ದುರುಪಯೋಗ ಪಡಿಸಿಕೊಂಡ ಭೀಮರಾಯ ಅವಳಿಂದ ಎಲ್ಲವನ್ನ ತೆಗೆದುಕೊಂಡು ಕೊನೆಗೆ ಅವಳನ್ನೇ ಮುಗಿಸಿಬಿಟ್ಟ. ಈ ಮನುಷ್ಯ ರೂಪ ವ್ಯಾಘ್ರನಿಗೆ ತಕ್ಕ ಶಿಕ್ಷೆಯಾಗಲಿ.