Crime News: ಸಸ್ಪೆಂಡ್ ಅವಧಿ ಮುಗಿದು ಬಸ್ ಏರಬೇಕಿದ್ದ KSRTC ಡ್ರೈವರ್‌ ಮರ್ಡರ್!

ಅವನು KSRTC ಬಸ್ ಡ್ರೈವರ್. ಕೆಲಸದಲ್ಲಿ ಮಾಡಬಾರದನ್ನ ಮಾಡಿ ಅಮಾನತ್ತಾಗಿದ್ದ. ಮೂರು ತಿಂಗಳ ಸಸ್ಪೆಂನ್ಷನ್ ಅವಧಿ ಮುಗಿಸಿಕೊಂಡು ಅವತ್ತು ಮತ್ತೆ ಆತ ಡ್ಯೂಟಿಗೆ ಜಾಯ್ನ್ ಆಗಬೇಕಿತ್ತು. ಕೆಲಸಕ್ಕೆ ಹೋಗುವ ಖಷಿಯಲ್ಲಿದ್ದವನು ಗೆಳೆಯರ ಜೊತೆ ಪಾರ್ಟಿ ಮಾಡಲು ಹೋದವನು ವಾಪಸ್ ಆಗಲೇ ಇಲ್ಲ.

First Published Nov 2, 2022, 4:26 PM IST | Last Updated Nov 2, 2022, 4:26 PM IST

ಅವನು KSRTC ಬಸ್ ಡ್ರೈವರ್. ಕೆಲಸದಲ್ಲಿ ಮಾಡಬಾರದನ್ನ ಮಾಡಿ ಅಮಾನತ್ತಾಗಿದ್ದ. ಮೂರು ತಿಂಗಳ ಸಸ್ಪೆಂನ್ಷನ್ ಅವಧಿ ಮುಗಿಸಿಕೊಂಡು ಅವತ್ತು ಮತ್ತೆ ಆತ ಡ್ಯೂಟಿಗೆ ಜಾಯ್ನ್ ಆಗಬೇಕಿತ್ತು. ಕೆಲಸಕ್ಕೆ ಹೋಗುವ ಖಷಿಯಲ್ಲಿದ್ದವನು ಗೆಳೆಯರ ಜೊತೆ ಪಾರ್ಟಿ ಮಾಡಲು ಹೋದವನು ವಾಪಸ್ ಆಗಲೇ ಇಲ್ಲ. ಪಾರ್ಟಿ ಮೂಡ್‌ನಲ್ಲಿದ್ದವನನ್ನ ಕೊಂದು ಹಾಕಲಾಗಿತ್ತು. ಇನ್ನೂ ಇದೇ ಸರ್ಕಾರಿ ನೌಕರನ ಕೊಲೆ ಕೇಸ್ ಬೆನ್ನತಿದ ಪೊಲೀಸರಿಗೆ ಕೊಲೆಗಾರ ಬಹುಬೇಗ ಸಿಕ್ಕಿಹಾಕಿಕೊಂಡು ಬಿಟ್ಟ. ಆದ್ರೆ ಯಾಕಪ್ಪ ಕೊಲೆ ಮಾಡಿದೆ ಅಂತ ಕೇಳಿದ್ರೆ ಆತ ಹೇಳಿದ್ದನ್ನ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿ ಹೀಗಿದ್ರು. ಕಾರಣ ಆತ ಹೇಳಿದ್ದು ಪ್ರತಿಕಾರದ ಪ್ರತಿಜ್ಞೆಯ ಕಥೆಯನ್ನ. ಹೀಗೆ ಸೇಡಿಗಾಗಿ KSRTC ಡ್ರೈವರ್ನ ಕಥೆ ಮುಗಿಸಿದವನ ಕಥೆಯೇ ಇವತ್ತಿನ ಎಫ್‌ಐಆರ್. ಶಿವಶರಣಪ್ಪ ಕುಟುಂಬ ಅನುಮಾನಿಸಿದವನನ್ನ ಎತ್ತಾಕೊಂಡು ಬಂದು ವಿಚಾರಣೆ ಮಾಡಿದ ಪೊಲೀಸರಿಗೆ ಯಾವುದೇ ಸುಳಿವು ಸಿಗೋದಿಲ್ಲ.

ಹೀಗಾಗಿ ಅವನ್ನ ಬಿಟ್ಟು ಕಳಿಸುತ್ತಾರೆ. ಹಾಗಾದ್ರೆ ಶಿವಶರಣಪ್ಪನನ್ನ ಕೊಂದಿದ್ಯಾರು? 5 ಗಂಟೆಗೆ ಅಂಗಡಿ ಮುಂದೆ ನಿಂತಿದ್ದವನನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು ಯಾರು? ಯಾವಾಗ ಶಿವಶರಣಪ್ಪನ ಕುಟುಂಬ ಅನುಮಾನ ಪಟ್ಟವನು ಕೊಲೆಗಾರ ಅಲ್ಲ ಅನ್ನೋದು ಗೊತ್ತಾಯ್ತೋ ಪೊಲೀಸರಿಗೆ ತಲೆನೋವ ಅಗಿಬಿಡುತ್ತೆ. ಏನಪ್ಪ ಮಾಡೋದು ಅಂತಿರುವಾಗ್ಲೇ ಅದೇ ಶಿವಶರಣಪ್ಪನ ಹೆಂಡತಿ ಇನ್ನೂ ಮೂವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾಳೆ. ಆದರೆ ಆಕೆಯ ಆರೋಪವನ್ನ ತಳ್ಳಿ ಹಾಕದೇ ಆ ಮೂವರ ಹಿಂದೆ ಬೀಳ್ತಾರೆ. ಆಗಲೇ ನೋಡಿ ನಿಜವಾದ ಕೊಲೆಗಾರ ತಗ್ಲಾಕಿಕೊಳ್ಳೋದು. ಯಸ್... ಬಲಭೀಮ ಪೊಲೀಸರ ಕೈಗೆ ತಗ್ಲಾಕೊಂಡ. ಆದ್ರೆ ಬಲಭೀಮ ಶಿವಶರಣಪ್ಪನನ್ನ ಕೊಂದಿದ್ಯಾಕೆ..? ಹೀಗಂತ ಪೊಲೀಸರು ಆತನನ್ನ ಕೇಳಿದಕ್ಕೆ ಆತ ಹೇಳಿದ್ದು ಒಂದು ಆ್ಯಕ್ಸಿಡೆಂಟ್ ಕಥೆಯನ್ನ. 5 ತಿಂಗಳ ಹಿಂದೆ ನಡೆದ ಅದೊಂದು ಆ್ಯಕ್ಸಿಡೆಂಟ್‌ನಲ್ಲಿ ಬಲಭೀಮನ ದೊಡ್ಡಪ್ಪ ಮರಣ ಹೊಂದಿದ್ದ. ದೊಡ್ಡಪ್ಪನ ಸಾವಿನ ಸೇಡಿಗಾಗೇ ಇವತ್ತು ಬಲಭೀಮ ಶಿವಶರಣಪ್ಪನನ್ನ ಕೊಂದು ಮುಗಿಸಿದನಂತೆ.