ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾರ್ ನಾಪತ್ತೆ: ಬಿಜೆಪಿ ಮುಖಂಡರ ಜತೆ ಇರುವ ವಿಡಿಯೋ ವೈರಲ್

ಸೂರಜ್ ಆಪ್ತ ಶಿವಕುಮಾರ್ ನಾಪತ್ತೆ ಆಗಿದ್ದು, ಹೊಳೆನರಸೀಪುರ ಠಾಣೆಗೆ ದೂರು ನೀಡಿದ ಬಳಿಕ ಎಲ್ಲೂ ಪತ್ತೆಯಾಗಿಲ್ಲ.
 

First Published Jun 23, 2024, 5:56 PM IST | Last Updated Jun 23, 2024, 5:56 PM IST

ಸೂರಜ್ ರೇವಣ್ಣ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ(Homosexuality Sexual Assault Case) ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾರ್ (Shivakumar) ನಾಪತ್ತೆ ಆಗಿದ್ದಾನೆ. ಹೊಳೆನರಸೀಪುರ ಠಾಣೆಗೆ ದೂರು ನೀಡಿದ ಬಳಿಕ ನಾಪತ್ತೆಯಾಗಿದ್ದು, ಸೂರಜ್ ಹಾಗೂ ಬೆಂಬಲಿಗರ ಸಂಪರ್ಕಕ್ಕೆ ಶಿವಕುಮಾರ್ ಸಿಗುತ್ತಿಲ್ಲವಂತೆ. ಸೂರಜ್(Suraj Revanna) ಜೊತೆಗಿದ್ದೇ ಬ್ಲ್ಯಾಕ್‌ಮೇಲ್‌ ಮಾಡಿರೋ ಆರೋಪ ಕೇಳಿಬಂದಿದೆ. ಆರೋಪ ಕೇಳಿಬಂದ ಬೆನ್ನಲ್ಲೇ ಶಿವಕುಮಾರ್ ನಾಪತ್ತೆ ಆಗಿದ್ದಾನೆ. BJP ಮುಖಂಡರ ಜತೆ ಶಿವಕುಮಾರ್ ಇರೋ ವಿಡಿಯೋ ವೈರಲ್ ಆಗಿದೆ. ಶಿವಕುಮಾರ್ ಮತ್ತು ಸಂತ್ರಸ್ತ ಇಬ್ಬರೂ ಇರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಇದೀಗ ಸೂರಜ್ ಆಪ್ತರಿಗೆ ಶಿವಕುಮಾರ್ ಮೇಲೆ ಅನುಮಾನ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ಕಿರಿಮಗನ ಕಾರಣಕ್ಕೆ ಅಪ್ಪನಿಗೆ ಜೈಲು, ಹಿರಿಮಗನಿಂದ ಮತ್ತೊಂದು ಸಂಕಷ್ಟ! ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮದ ಆರೋಪ..!