ಹಂತಕರ ಬೇಟೆಗಿಳಿದಿದ್ದ ಶ್ವಾನದಿಂದ ಆಪರೇಶನ್ ಸಕ್ಸಸ್; 11 ಕಿಮೀ ಚೇಸಿಂಗ್ ಕಥೆಯಿದು..!
ಒಂದು ಕ್ರೈಂ ನಡೆದಾಗ ಏಕಾಯ್ತು? ಹೇಗಾಯ್ತು? ಕಾರಣವೇನು? ಎಂಬುದು ಎಷ್ಟು ಮುಖ್ಯವೋ ಅದರ ಇನ್ವೆಷ್ಟಿಗೇಶನ್ ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಚಿಕ್ಕ ಕ್ಲೂನಿಂದ ಪಾತಕಿಯ ಜಾಡು ಹಿಡಿಯೋದು ರೋಚಕ.
ಬೆಂಗಳೂರು (ಜು. 21): ಒಂದು ಕ್ರೈಂ ನಡೆದಾಗ ಏಕಾಯ್ತು? ಹೇಗಾಯ್ತು? ಕಾರಣವೇನು? ಎಂಬುದು ಎಷ್ಟು ಮುಖ್ಯವೋ ಅದರ ಇನ್ವೆಷ್ಟಿಗೇಶನ್ ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಚಿಕ್ಕ ಕ್ಲೂನಿಂದ ಪಾತಕಿಯ ಜಾಡು ಹಿಡಿಯೋದು ರೋಚಕ.
ದಾವಣಗೆರೆಯ ಸೂಳೆಕೆರೆಯ ದಂಡೆ ಮೇಲೆ ಶವವೊಂದು ಪತ್ತೆಯಾಗುತ್ತದೆ. ತಲೆಯನ್ನು ಕಲ್ಲಿನಿಂದ ಜಜ್ಜಲಾಗಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭಿಸುತ್ತಾರೆ. ಹಂತಕರ ಬೇಟೆಗಿಳಿದಿದ್ದ ಶ್ವಾನವೊಂದು ಕೆಲವೇ ಗಂಟೆಗಳಲ್ಲಿ ಬೇಟೆ ಮುಗಿಸಿತ್ತು. ಸೂಪರ್ ಕಾಪ್‌ನ 11 ಕಿಮೀ ಚೇಸಿಂಗ್ ಕಥೆ ಇಂದಿನ ಎಫ್‌ಐಆರ್‌ನಲ್ಲಿ..!