Asianet Suvarna News Asianet Suvarna News

ಪಕ್ಕದಲ್ಲಿದ್ದವರೇ ಅವನಿಗೆ ಮುಹೂರ್ತ ಇಟ್ಟಿದ್ರು..! ಹವಾ ಕ್ರಿಯೇಟ್ ಮಾಡಲು ಹೋಗಿ ಮಸಣ ಸೇರಿದ..!

ಹಾಕೋಕೆ ಬಂದವರು ಬಾಸ್ನೇ ಎತ್ತಿಬಿಟ್ರು..!
ಮೂರು ಗಂಟೆಗಳಲ್ಲಿ ಹಂತಕರು ಅಂದರ್..!
11 ಮಂದಿ ಅವನ ಮೇಲೆ ಎರಗಿಬಿಟ್ಟಿದ್ದರು..!
 

First Published Mar 31, 2024, 6:31 PM IST | Last Updated Mar 31, 2024, 6:31 PM IST

ಅವನು ರೌಡಿ ಶೀಟರ್. ಮೂರ್ನಾಲ್ಕು ಸ್ಟೇಷನ್‌ಗಳಲ್ಲಿ ಇವನು ವಾಂಟೆಡ್ ಲಿಸ್ಟ್ನಲ್ಲಿದ್ದ. ಮೂರು ವರ್ಷ ಪೊಲೀಸರ(Police) ಕೈಗೆ ಸಿಗದೇ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ. ಆದ್ರೆ ಆವತ್ತು ಬೆಂಗಳೂರಿನ(Bengaluru) ಸರ್ವೀಸ್ ಅಪಾರ್ಟ್ಮೆಂಟ್‌ನಲ್ಲಿ ಕೊಲೆಯಾಗಿ ಹೋಗಿದ್ದ. ರೂಮ್ ಕೇಳಿಕೊಂಡು ಆವತ್ತು ಆತ ಮತ್ತು ಆತನ ಶಿಷ್ಯರು ಬಂದಿದ್ರು. ಆದ್ರೆ ರಿಸೆಪ್ಷನ್ ಬಳಿ ಕೂತಿದ್ದಾಗಲೇ ಹಂತಕರು ಅವನ ಕಥೆ ಮುಗಿಸಿ ಹೋಗಿದ್ರು. ತನ್ನವರಿಂದಲೇ ದಿನೇಶ ಮರ್ಡರ್(Murder) ಆಗಿದ್ದ. ಶಿಷ್ಯರು ಅಂತ ಬಂದವರೇ ದಿನೇಶನ ಕೊಲೆ ಮಾಡಿ ಎಸ್ಕೆಪ್ ಆಗಿದ್ರು. ಇನ್ನೂ ಅವನ ಸಹಚರರೇ ಯಾಕೆ ಅವನನ್ನ ಕೊಂದರು ಅಂತ ತನಿಖೆ ನಡೆಸಿದ ಪೊಲೀಸರಿಗೆ ಮತ್ತಷ್ಟು ರೋಚಕ ಸಂಗತಿಗಳು ಸಿಕ್ಕಿದ್ವು. ಅದು ಹವಾ ಮೆಂಟೇನ್ ಮಾಡಲು ಹೋಗಿ ಹುಟ್ಟಿಕೊಂಡಿದ್ದ ಎರಡು ಗ್ಯಾಂಗ್ಗಳು. ಒಂದು ಕಡೆ ದಿನೇಶನ ಗ್ಯಾಂಗ್ ಆದ್ರೆ ಮತ್ತೊಂದೆಡೆ ಸ್ಪೀಡ್ ದಿಲೀಪನ ಗ್ಯಾಂಗ್. ಒಬ್ಬರನ್ನೊಬ್ಬರು ವರ್ಷಗಳಿಂದ ಕತ್ತಿ ಮಸೆಯುತ್ತಲೇ ಇದ್ದರೂ. ಸ್ಕೆಚ್ಗಳು ರೆಡಿಯಾಗ್ತಾನೇ ಇದ್ವು, ಆದ್ರೆ ಯಾರ ತಲೆ ಕೂಡ ಉರಳಿರಲಿಲ್ಲ.. ಆದ್ರೆ ಈ ಬಾರಿ ಸ್ಪೀಡ್ ದಿಲೀಪನ ಸ್ಕೆಚ್ ಪಕ್ಕಾ ವರ್ಕ್ ಆಗಿತ್ತು ಕಾರಣ ದಿನೇಶನ ಗ್ಯಾಂಗ್ನಲ್ಲಿದ್ದವನೇ ದಿಲೀಪನ ಜೊತೆ ಕೈ ಜೋಡಿಸಿದ್ದ. ದಿನೇಶನ ಸ್ಕೆಚ್ ರೆಡಿ ಆಗುವ ಮೊನ್ನವೇ ದಿಲೀಪ್ ಆ್ಯಂಡ್ ಗ್ಯಾಂಗ್ ಅವನ ಕಥೆ ಮುಗಿಸಿತ್ತು.

ಇದನ್ನೂ ವೀಕ್ಷಿಸಿ:  ಭಾರತ ನಾಗರಿಕ ಹಕ್ಕುಗಳ ಕುರಿತು ಅನುಮಾನ ಪಟ್ಟಿತಾ ವಿಶ್ವಸಂಸ್ಥೆ..? ಕೇಜ್ರಿವಾಲ್ ಬಂಧನ ರಾಜಕೀಯ ಪ್ರೇರಿತ ಎಂದು ಹೇಳಿದ್ಯಾರು..?