Asianet Suvarna News Asianet Suvarna News

PFI Banned:ನಿವೃತ್ತ ಮುಸ್ಲಿಂ ಪೊಲೀಸ್ ಅಧಿಕಾರಿಗಳಿಂದಲೇ ಪಿಎಫ್‌ಐಗೆ ಉಗ್ರ ತರಬೇತಿ

ದೇಶದೆಲ್ಲೆಡೆ ಪಿಎಫ್‌ಐ ಹಾಗೂ ಅದರ ಎಂಟು ಅಂಗ ಸಂಸ್ಥೆಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದ್ದೇ ಮಾಡಿದ್ದು, ಈ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಇದೀಗ ಸತ್ಯಮಂಗಲಂನಲ್ಲಿ ಉಗ್ರ ಕ್ಯಾಂಪ್ ನಡೆದಿದ್ದು, ಅಲ್ಲಿಯೇ ದುಷ್ಕೃತ್ಯಗಳಿಗೆ ಪ್ಲ್ಯಾನ್ ಮಾಡಲಾಗಿತ್ತು ಎಂಬ ಸತ್ಯ ಬೆಳಕಿಗೆ ಬಂದಿದೆ. 

ಇತ್ತೀಚೆಗೆ ತಮಿಳುನಾಡಿನ ಸತ್ಯಮಂಗಲಂ ಫಾರೆಸ್ಟ್‌ನಲ್ಲಿ ಕ್ಯಾಂಪ್ ಮಾಡಿತ್ತು ಪಿಎಫ್ಐ. ಕ್ಯಾಂಪಿನಲ್ಲಿ ಭಾಗವಹಿಸಿ, ಎಲ್ಲೆಡೆ ನಡೆಸಬೇಕಾಗಿರುವ ದುಷ್ಕೃತ್ಯಗಳಿಗೆ ಪ್ಲಾನ್‌ ಮಾಡಲಾಗಿತ್ತು. ಕಾಡಿನಲ್ಲಿ ನಡೆದ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದ ಎ1 ನಾಸಿರ್ ಪಾಷಾ ಸೇರಿ ಐವರು ಆರೋಪಿಗಳನ್ನು ಸ್ಥಳ ಮಹಜರ್ ಮಾಡಲು ಪೊಲೀಸರು ಕರೆದೋಯ್ದಿದ್ದಾರೆ. ಪುತ್ತೂರಿನಲ್ಲಿಯೂ ಟ್ರೈನಿಂಗ್ ಕ್ಯಾಂಪ್ ಮಾಡಿರುವುದಾಗಿ ಆರೋಪಿಗಳು ಹೇಳಿ ಕೊಂಡಿದ್ದರಿಂದ ಮತ್ತೊಂದು ಪೊಲೀಸರ ತಂಡ ಅಲ್ಲಿಗೂ ತೆರಳಿದೆ. ಸತ್ಯಮಂಗಲಂನಲ್ಲಿ ನಡೆದ ಕ್ಯಾಂಪ್ ಕುರಿತು ಆರೋಪಿಗಳ ಮೊಬೈಲ್ ಹಲವು ಸಾಕ್ಷಿ ಲಭ್ಯವಾಗಿವೆ. ದಾವಣಗೆರೆಯಲ್ಲಿಯೂ ಮಹಜರ್ ಮಾಡಿದ್ದಾರೆ ಪೊಲೀಸರು. ನಾಳೆಗೆ ಆರೋಪಿಗಳ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಮಹಜರ್ ಮುಗಿಸಲು ಮುಂದಾಗಿದೆ ತನಿಖಾ ತಂಡ. ರಾಜ್ಯದಲ್ಲಿ ದುಷ್ಕೃತ್ಯ ನಡೆಸಲು ಹಲವು ಜಾಗಗಳಲ್ಲಿ ಸಭೆ ಹಾಗೂ ಟ್ರೈನಿಂಗ್ ಕ್ಯಾಂಪ್ (Training Camp) ಮಾಡಿದ್ದರು ಪಿಎಫ್ಐ ಕಾರ್ಯಕರ್ತರು. ಮಂಗಳೂರಿನ (Mangalore) ಬಂಟ್ವಾಳವೂ ಪಿಎಫ್‌ಐ ಸ್ಲೀಪರ್ ಸೆಲ್ (Sleepr Cell) ಆಗಿತ್ತು. ಅಲ್ಲದೇ ಈ ಪಿಎಫ್‌ಐ ಕಾರ್ಯಕರ್ತರಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳಿಂತಲೇ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬು ಮಾಹಿತಿ ಲಭ್ಯವಾಗಿದೆ. 

PFI Twitter Accounts Taken Down: ಪಿಎಫ್‌ಐ, ಸಿಎಫ್‌ಐ ನಾಯಕರ ಖಾತೆಗೆ ಟ್ವಿಟರ್‌ ಬೇಲಿ!

Video Top Stories