ಕಿಡ್ನಾಪ್, ಹಲ್ಲೆ, ಹತ್ಯೆ, ಸಾಕ್ಷ್ಯ ನಾಶ: ಎಲ್ಲವೂ ನಟ ದರ್ಶನ್ ಸೂಚನೆಯಂತೆ ನಡೆದಿತ್ತಾ?

ಎ2 ಆರೋಪಿಯಾಗಿದ್ದ ದರ್ಶನ್‌ ಚಾರ್ಜ್‌ಶೀಟ್‌ನಲ್ಲಿ ಎ1 ಆರೋಪಿಯಾಗುವುದು ಬಹುತೇಕ ಪಕ್ಕಾ, ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ಬಿಜೆಪಿ ಭಾರಿ ಪ್ರತಿಭಟನೆ, ನಾಲ್ಕು ಹಳೇ ಪ್ರಕರಣಗಳ ತೆಗೆದು ಸಿದ್ದರಾಮಯ್ಯ ಸರ್ಕಾರ, ಬಿಜೆಪಿಗೆ ತಿರುಗೇಟು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Aug 22, 2024, 11:14 PM IST | Last Updated Aug 22, 2024, 11:14 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗ್ಯಾಂಗ್ ಸಂಕಷ್ಟ ಹೆಚ್ಚಾಗಿದೆ. ಹಲ್ಲೆ ಹಾಗೂ ಕೊಲೆ ಸಂಬಂಧಿಸಿದಂತೆ ಆರೋಪಿಗಳ ಮೊಬೈಲ್‌ನಲ್ಲಿದ್ದ ನಾಲ್ಕು ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ. ಇದು ದರ್ಶನ್ ಗ್ಯಾಂಗ್ ನಡೆಸಿದ ಭೀಕರ ಹಲ್ಲೆ ಹಾಗೂ ಹತ್ಯೆ ಕತೆ ಹೇಳುತ್ತಿದೆ. ಇಷ್ಟೇ ಅಲ್ಲ ಈ ಘಟನೆಯಲ್ಲಿ ರೇಣುಕಾಸ್ವಾಮಿ ಅಪಹರಣ, ಬೆಂಗಳೂರಿಗೆ ಕರೆಸಿಕೊಂಡು ಬಂದು ಹಲ್ಲೆ ಹಾಗೂ ಹತ್ಯೆ, ಸಾಕ್ಷ್ಯ ನಾಶ ಸೇರಿದಂತೆ ಎಲ್ಲವೂ ನಟ ದರ್ಶನ್ ಸೂಚನೆಯಂತೆ ನಡೆದಿದೆ ಎಂದು ಮಾಹಿತಿಗಳು ಕೇಳಿಬರುತ್ತಿದೆ. ಹೀಗಾಗಿ ಚಾರ್ಜ್‌ಶೀಟ್‌ನಲ್ಲಿ ನಟ ದರ್ಶನ್ ಎ1 ಆರೋಪಿಯಾಗಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
 

Video Top Stories