Asianet Suvarna News Asianet Suvarna News

ಇವರು ಪೊಲೀಸ್ ಇನ್ಸ್‌ಪೆಕ್ಟರ್, ಮಾಡೋದು ರಿಯಲ್ ಎಸ್ಟೇಟ್ ಡೀಲ್; ರೈತರ ಹೆಸರಲ್ಲಿ ಜೇಬಿಗಿಳಿಸ್ತಾರೆ ಕಾಸು!

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಮೂಗು ತೂರಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಪ್ರಭಾಕರ್ ರೆಡ್ಡಿ ಎಂಬುವವರ ಪತ್ನಿ ಪತ್ನಿ ಪವಿತ್ರ ಸಾಕ್ಷಿ ಸಮೇತ ದೂರು ನೀಡಿದ್ದಾರೆ. 

ಬೆಂಗಳೂರು (ನ. 09): ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಮೂಗು ತೂರಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಪ್ರಭಾಕರ್ ರೆಡ್ಡಿ ಎಂಬುವವರ ಪತ್ನಿ ಪತ್ನಿ ಪವಿತ್ರ ಸಾಕ್ಷಿ ಸಮೇತ ದೂರು ನೀಡಿದ್ದಾರೆ. 

ಮನೆಗೆ ರೌಡಿಶೀಟರ್‌ಗಳನ್ನು ಕರೆಸಿಕೊಂಡು ಇನ್ಸ್‌ಪೆಕ್ಟರ್‌ನಿಂದ ರಿಯಲ್ ಎಸ್ಟೇಟ್ ಡೀಲ್!

ರೈತರ ಸುಳ್ಳು ದಾಖಲೆ ಮಾಡಿ, ಸೈಟ್ ವ್ಯಾಪಾರಕ್ಕೆ ಮಾಡಿಸುತ್ತಾರೆ. ಪ್ರಭಾಕರ್ ರೆಡ್ಡಿ ಜೊತೆ ಮೋಜು, ಮಸ್ತಿ ಮಾಡುತ್ತಾರೆ. ರೌಡಿ ಶೀಟರ್‌ಗಳನ್ನು ಮನೆಗೆ ಕರೆಸಿಕೊಂಡು ಡೀಲ್ ಮಾಡುತ್ತಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಪವಿತ್ರಾ ಆರೋಪಿಸಿದ್ದಾರೆ. ಕಿಶೋರ್ ಕುಮಾರ್  ರೌಡಿ ಶೀಟರ್ ಜೊತೆ ಮಾತನಾಡಿರುವ ಆಡಿಯೋವೊಂದು ಲಭ್ಯವಾಗಿದೆ. 

Video Top Stories