Asianet Suvarna News Asianet Suvarna News

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್: 'ಹನಿಟ್ರ್ಯಾಪ್ ಖೆಡ್ಡಾ'ಗೆ ಬೀಳಿಸಿದ ಸಹೋದರ

ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಇಷ್ಟಕ್ಕೆಲ್ಲಾ ದಾಯಾದಿ ಕಲಹವೇ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ.

First Published Oct 31, 2022, 3:11 PM IST | Last Updated Oct 31, 2022, 3:11 PM IST

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ಕಣ್ಣೂರು ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರದ ಇಂಜನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಮೂವರು ಬಂಧಿತ ಆರೋಪಿಗಳಾಗಿದ್ದಾರೆ. ಮೂವರಿಗೂ 25 ದಿನ ನ್ಯಾಯಾಂಗ ಬಂಧನಕ್ಕೆ ನೀಡಿಲಾಗಿದೆ. ವಿಚಾರಣೆಯ ವೇಳೆ ಬೆಚ್ಚಿ ಬೀಳುವ ಸೀಕ್ರೆಟ್‌ ಹೊರ ಬಿದ್ದಿದೆ. ದಾಯಾದಿ ಕಲಹಕ್ಕೆ ಬಸವಲಿಂಗ ಸ್ವಾಮೀಜಿಯನ್ನು, ಅವರ ಸಹೋದರ ಮೃತ್ಯಂಜಯ ಶ್ರೀ ಹನಿಟ್ರ್ಯಾಪ್ ಮಾಡಿಸುವ ಮೂಲಕ ಖೆಡ್ಡಾಗೆ ಕೆಡುವಿರೋ ರೋಚಕ ಮಾಹಿತಿ ಹೊರಗೆ ಬಿದ್ದಿದೆ.‌

ಬೆಂಗಳೂರು: ಪತ್ನಿ ಕೊಲೆಗೈದು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ?

Video Top Stories