ವಾರಕ್ಕೆ, ಹದಿನೈದು ದಿನಕ್ಕೊಮ್ಮೆ ಡ್ರಗ್ ತೆಗೆದುಕೊಳ್ಳುತ್ತಿದ್ದರಂತೆ ರಾಗಿಣಿ..!

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಡೀಲ್‌ಗೆ ಸಂಬಂಧಿಸಿದಂತೆ ಮತ್ತೊಂದು ಎಕ್ಸ್‌ಕ್ಲೂಸಿವ್ ಸುದ್ದಿ ನಿಮ್ಮ ಸುವರ್ಣ ನ್ಯೂಸ್‌ನಲ್ಲಿ. ಆರಂಭದಲ್ಲಿ ಎಲ್ಲವನ್ನು ಒಪ್ಪಿಕೊಂಡಿದ್ದ ರಾಗಿಣಿ ಈಗ ಉಲ್ಟಾ ಹೊಡೆಯೋಕೆ ಶುರು ಮಾಡಿದ್ದಾರೆ.  ಸಿಸಿಬಿ ತನಿಖೆಗೆ ಸಹಕರಿಸುತ್ತಿಲ್ಲ. 'ನನ್ನನ್ನು ನನ್ನ ಮನೆಯಲ್ಲಿಟ್ಟು ತನಿಖೆ ಮಾಡಿ, ಅಥವಾ ಸ್ಟಾರ್ ಹೊಟೇಲ್‌ನಲ್ಲಿಟ್ಟು ತನಿಖೆ ಮಾಡಿ. ಇಲ್ಲದಿದ್ದರೆ ನಾನು ಸಹಕರಿಸುವುದಿಲ್ಲ' ಎಂದು ರಾಗಿಣಿ ಕ್ಯಾತೆ ತೆಗೆದಿದ್ದಾರೆ.

First Published Sep 7, 2020, 2:05 PM IST | Last Updated Sep 7, 2020, 2:05 PM IST

ಬೆಂಗಳೂರು (ಸೆ. 07): ಸ್ಯಾಂಡಲ್‌ವುಡ್‌ ಡ್ರಗ್ಸ್‌ ಡೀಲ್‌ಗೆ ಸಂಬಂಧಿಸಿದಂತೆ ಮತ್ತೊಂದು ಎಕ್ಸ್‌ಕ್ಲೂಸಿವ್ ಸುದ್ದಿ ನಿಮ್ಮ ಸುವರ್ಣ ನ್ಯೂಸ್‌ನಲ್ಲಿ. ಆರಂಭದಲ್ಲಿ ಎಲ್ಲವನ್ನು ಒಪ್ಪಿಕೊಂಡಿದ್ದ ರಾಗಿಣಿ ಈಗ ಉಲ್ಟಾ ಹೊಡೆಯೋಕೆ ಶುರು ಮಾಡಿದ್ದಾರೆ.  ಸಿಸಿಬಿ ತನಿಖೆಗೆ ಸಹಕರಿಸುತ್ತಿಲ್ಲ. 'ನನ್ನನ್ನು ನನ್ನ ಮನೆಯಲ್ಲಿಟ್ಟು ತನಿಖೆ ಮಾಡಿ, ಅಥವಾ ಸ್ಟಾರ್ ಹೊಟೇಲ್‌ನಲ್ಲಿಟ್ಟು ತನಿಖೆ ಮಾಡಿ. ಇಲ್ಲದಿದ್ದರೆ ನಾನು ಸಹಕರಿಸುವುದಿಲ್ಲ' ಎಂದು ರಾಗಿಣಿ ಕ್ಯಾತೆ ತೆಗೆದಿದ್ದಾರೆ.

ಇನ್ನೊಂದು ಕಡೆ ರವಿಶಂಕರ್ ಹಾಗೂ ರಾಗಿಣಿ ಮೊಬೈಲ್ ಡಿಟೇಲ್ ಅಧಾರದ ಮೇಲೆ ಕಳೆದ 6 ತಿಂಗಳಲ್ಲಿ ನಡೆದ ಡ್ರಗ್‌ ಡೀಲ್‌ಗಳ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ. ವಾರ, ಹದಿನೈದು ದಿನಕ್ಕೊಮ್ಮೆ ರಾಗಿಣಿ ಡ್ರಗ್ ತರಿಸಿಕೊಳ್ಳುತ್ತಿದ್ದರು. ಪ್ರತಿ ಮಾತ್ರೆಯ ಬೆಲೆ 3 ಸಾವಿರ ರೂಪಾಯಿ. ಒಂದು ಸಲಕ್ಕೆ 2 ಮಾತ್ರೆಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಸಿಸಿಬಿ ತನಿಖೆಯಲ್ಲಿ ಸಿಕ್ಕ ಮಾಹಿತಿ. ಇದನ್ನು ಒಪ್ಪಿಕೊಳ್ಳಲು ರಾಗಿಣಿ ತಯಾರಿಲ್ಲ. ಕಳೆದ 6 ತಿಂಗಳ ಡ್ರಗ್ ಡೀಲ್ ಡಿಟೇಲ್ಸ್‌ ಇಲ್ಲಿದೆ ನೋಡಿ..!
ಸಂಬರಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ: ಸಂಜನಾ