Asianet Suvarna News Asianet Suvarna News

ಪ್ರೀತಿ, ಪ್ರೇಮವೆಂದು ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ; SDPI ಮುಖಂಡನ ಮಗ ಅರೆಸ್ಟ್!

Oct 7, 2020, 1:33 PM IST

ಬೆಂಗಳೂರು (ಅ. 07): ಪುತ್ತೂರು ತಾಲೂಕಿನ SDPI ಮುಖಂಡ ಅಬ್ದುಲ್ ಹಮೀದ್ ಸಾಲ್ವ ಪುತ್ರ ಫೈಜಲ್‌ನನ್ನು ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪದಡಿ ಬಂಧಿಸಲಾಗಿದೆ. 

ಇನ್ಸ್ಟಾಗ್ರಾಮ್‌ನಲ್ಲಿ ಫೈಜಲ್‌ಗೆ ಆಂಧ್ರ ಮೂಲದ ಹುಡುಗಿಯೊಬ್ಬಳು ಪರಿಚಯವಾಗುತ್ತಾಳೆ. ಮದುವೆಯಾಗುವಂತೆ ಗಂಟು ಬೀಳುತ್ತಾನೆ. ಪ್ರೀತಿ, ಪ್ರೇಮ ಎಂದೆಲ್ಲಾ ನಂಬಿಸಿ ಲೈಂಗಿಕ ಕಿರುಕುಳವನ್ನೂ ಕೊಟ್ಟು, ಕೊನೆಗೆ ಕೈ ಕೊಡುತ್ತಾನೆ. 

ಹತ್ರಾಸ್ ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ಭೀಮ ಸೇನೆ ಮುಖ್ಯಸ್ಥನ ಮೇಲೆ FIR

ಈತನ ವಿರುದ್ಧ ಯುವತಿ ಆಂಧ್ರ ಪ್ರದೇಶದಲ್ಲಿ ದೂರು ನೀಡುತ್ತಾಳೆ. ಆಂಧ್ರ ಪೊಲೀಸರು ಪುತ್ತೂರಿಗೆ ಬಂದು ಈತನನ್ನು ಅರೆಸ್ಟ್ ಮಾಡುತ್ತಾರೆ. ಈತನ ತಂದೆ ಹತ್ರಾಸ್ ಅತ್ಯಾಚಾರ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿದರೆ, ಅತ್ತ ಮಗ ದಲಿತ ಯುವತಿಗೆ ಕಿರುಕುಳ ನೀಡಿ ಅರೆಸ್ಟ್ ಆಗುತ್ತಾರೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!
 

Video Top Stories