'ಸಂಜನಾ ಬಗ್ಗೆ ಮಾತನಾಡಿ ಗಲೀಜು ಮಾಡಿಕೊಳ್ಳಲ್ಲ, ರಾಗಿಣಿ ವಿರುದ್ಧ ಕ್ರಮ ಯಾಕಿಲ್ಲ?'
- ಬೇರೆ ಬೇರೆ ತಿರುವು ಪಡೆಯುತ್ತಿರುವ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಗಲಾಟೆ!
- ಯುವ ನಟ-ನಟಿಯರ ವಿರುದ್ಧ ತಿರುಗಿ ಬೀಳುತ್ತಿರುವ ಸಿನಿಮಾ ಮಂದಿ
- ಸಂಜನಾ ಗಲ್ರಾನಿ, ರಾಗಿಣಿ ವಿರುದ್ಧ ಪ್ರಶಾಂತ್ ಸಂಬರ್ಗಿ ವಾಗ್ದಾಳಿ
ಬೆಂಗಳೂರು (ಸೆ. 03): ಸ್ಯಾಂಡಲ್‌ವುಡ್‌ನ ಡ್ರಗ್ಸ್ ಗಲಾಟೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೊಸ ಹೊಸ ಡ್ರಗ್ ಪೆಡ್ಲರ್‌ಗಳ ಹೆಸರುಗಳು, ಅವರಿಗೆ ನಟಿಯರೊಂದಿಗಿರುವ ನಂಟು ಎಲ್ಲಾ ಬಯಲಾಗುತ್ತಿದೆ. ಮುಖವಾಡಗಳು ಕಳಚಿ ಬೀಳುತ್ತಿವೆ, ಹಚ್ಚಿದ ಬಣ್ಣಗಳು ಮಾಸುತ್ತಿವೆ.
ಇದನ್ನೂ ನೋಡಿ | ಪ್ರಶಾಂತ್‌ಗೆ ನನ್ನ ಹೆಸರು ಹೇಳೋ ಧೈರ್ಯವಿಲ್ಲ; ರಾಜಕಾರಣಿಗಳಿಗೆ ಅವ್ರು ಸರ್ವೆಂಟ್?...
ಇವುಗಳ ನಡುವೆ ಇಂಡಸ್ಟ್ರಿಯ ಕೆಲ ಹಿರಿಯ ಮಂದಿ ಯುವ ನಟ-ನಟಿಯರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಸಿನಿಮಾರಂಗದೊಂದಿಗೆ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.