Asianet Suvarna News Asianet Suvarna News

ಟಿಪ್ಪು ಬ್ಯಾನರ್‌ ಹರಿದ ಹಿಂದೂ ಮುಖಂಡ ಪುನೀತ್ ಸೇರಿದಂತೆ ನಾಲ್ವರು ಪೊಲೀಸರ ವಶಕ್ಕೆ!

ಕೆಆರ್ ಸರ್ಕಲ್ ಬಳಿ ಕಾಂಗ್ರೆಸ್ ಹಾಕಿದ್ದ ಟಿಪ್ಪುವಿನ ಬ್ಯಾನರ್ ಹರಿದು ಹಾಕಿದ ಪ್ರಕರಣದಡಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
 

Aug 14, 2022, 3:49 PM IST

ಕೆಆರ್ ವೃತ್ತದ ಬಳಿ ಕಾಂಗ್ರೆಸ್ ಹಾಕಿದ್ದ ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣದಡಿ ನಾಲ್ವರನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ(ಆ.13) ತಡ ರಾತ್ರಿ ಕೆಆರ್ ಸರ್ಕಲ್ ಬಳಿ ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ ಕುರಿತು ಕಾಂಗ್ರೆಸ್ ದೂರು ದಾಖಲಿಸಲಾಗಿತ್ತು. ಈ ಕುರಿತು ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಕೃತ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನಾಲ್ವರ ಮೊಬೈಲ್ ಟ್ರೇಸ್ ಮಾಡಿದ ಪೊಲೀಸರು ಬೆಂಗಳೂರಿನ ಹೊರವಲಯದಲ್ಲಿ ಪುನೀತ್ ಕೆರೆಹಳ್ಳಿ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.