Asianet Suvarna News Asianet Suvarna News

ಪಾದರಾಯನಪುರ: ಮತ್ತೆ ಬಾಲ ಬಿಚ್ಚಿದ ಮಹಿಳೆಯರು, ಈ ಬಾರಿ ಏನಂತೆ?

ಮತ್ತೆ ಪಾದರಾಯನಪುರದಲ್ಲಿ ಹೆಂಗಸರಿಂದ ಗಲಾಟೆ ..!  ಆ ರಸ್ತೆ ಯಾಕೆ ಫ್ರೀ ಮಾಡ್ತೀರಾ.. ನಮ್ಮ ರಸ್ತೆಯನ್ನು ಫ್ರೀ ಮಾಡಿ/ ಕೊರೊನಾ ಇಲ್ಲದ ಕಡೆ ರಸ್ತೆಯನ್ನು ಫ್ರೀ ಮಾಡುವಂತೆ ಸೂಚಿಸಿದ್ದ ಡಾಕ್ಟರ್ ಗಳು/  ಹೀಗಾಗಿ ಕೆಲ ರಸ್ತೆಗಳನ್ನು ಫ್ರೀ ಮಾಡಲು ಹೊರಟಿದ್ದ ಪೊಲೀಸರು

First Published May 29, 2020, 6:18 PM IST | Last Updated May 29, 2020, 6:20 PM IST

ಬೆಂಗಳೂರು(ಮೇ 29) ಕ್ವಾರಂಟೈನ್ ಗೆ ಬನ್ನಿ ಎಂದು ಕರೆಯಲು ಹೋಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಪಾದರಾಯನಪುರದಲ್ಲಿ ಹಲ್ಲೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.  ಆರೋಪಿಗಳನ್ನು ಬಂಧಿಸಿ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿತ್ತು.

ಬುದ್ಧಿ ಕಲಿಯದ ಪಾದರಾಯನಪುರ ಜನ; ಹಲ್ಲೆ ಮಾಡಿದವರ ಕತೆ ನೋಡಿ

ಈಗ ಪಾದರಾಯನಪುರದಲ್ಲಿ ಮಹಿಳೆಯರು ಬಾಲ ಬಿಚ್ಚಿದ್ದಾರೆ.  ಪಾದರಾಯನಪುರ 11 ನೇ  ಕ್ರಾಸ್ ನ ಕೆಲ ಅಡ್ಡರಸ್ತೆಗಳನ್ನ ಫ್ರೀ ಮಾಡಲು ತೆರಳಿದ್ದ ಪೊಲೀಸರೊಂದಿಗೆ ಅಲ್ಲಿನ ಮಹಿಳೆಯರು ವಾಗ್ವಾದಕ್ಕೆ ಇಳಿದಿದ್ದಾರೆ.  ಸದ್ಯ ಯಥಾಸ್ಥಿತಿಯೇ ಅಲ್ಲಿದೆ.

ಆ ರಸ್ತೆ ಯಾಕೆ ಫ್ರೀ ಮಾಡ್ತೀರಾ.. ನಮ್ಮ ರಸ್ತೆಯನ್ನು ಫ್ರೀ ಮಾಡಿ  ಎಂದು ಪೊಲೀಸರಿಗೆ ಬೇಡಿಕೆ ಇಟ್ಟಿದ್ದಾರೆ. ಕೊರೋನಾ ಇಲ್ಲದ ಕಡೆ ರಸ್ತೆ ಫ್ರೀ ಮಾಡಿ ಎಂದು ವೈದ್ಯರು ಹೇಳಿದ್ದರು. 


 

Video Top Stories