Asianet Suvarna News Asianet Suvarna News

ಬೆಂಗಳೂರು: ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಚಾಕುವಿನಿಂದ ಇರಿದರು!

Jan 5, 2020, 8:49 PM IST

ಬೆಂಗಳೂರು(ಜ. 05)  ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಹೋಟೆಲ್ ಸಪ್ಲೈಯರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೊಸ ವರ್ಷಾಚರಣೆ: ಕುಡುಕರ ಎಂದೂ ಮುರಿಯದ ದಾಖಲೆ

ಹೊಸ ವರ್ಷಾಚರಣೆ ವೇಳೆ ಕಿಡಿಗೇಡಿಗಳು ಗುಂಡಾವರ್ತನೆ ತೋರಿಸಿದ್ದಾರೆ. ದೊಡ್ಡಬಾಣಸವಾಡಿಯ ಓಲಿವ್ ರೆಸಿಡೆನ್ಸಿ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ ಆರೋಪಿಗಳು ಪಾರ್ಟಿ ಮಾಡಿದ್ದರು. ಗಲಾಟೆ ಮಾಡಬೇಡಿ ಎಂದಿದಕ್ಕೆ ಏಕಾಏಕಿ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.