ಅವನನ್ನ ಕೊಂದಿದ್ದು ಅಕ್ಕನ ಗಂಡ ! ತಮ್ಮನಂತಿದ್ದವನನ್ನೇ ಕೊಂದು ಮುಗಿಸಿದ್ದ ಅಣ್ಣ !

ರಾತ್ರಿ ಮಲಗಿದವನು ಬೆಳಗಾಗುವದರಲ್ಲಿ ಹೆಣವಾಗಿದ್ದ..!
ಅನ್ನಹಾಕಿ, ಆಶ್ರಯ ಕೊಟ್ಟಿದವನ ಮೇಲೆಯೇ ಅನುಮಾನ..!
ಅವನನ್ನ ಮುಗಿಸಲು ನಾದಿನಿಯನ್ನ ಊರಿಗೆ ಕಳಿಸಿದ್ದ..!

First Published Oct 4, 2023, 2:56 PM IST | Last Updated Oct 4, 2023, 2:56 PM IST

ಅವನು ಚಿಕನ್ ಅಂಗಡಿ ಮೌಲಾ. ಪ್ರತೀ ನಿತ್ಯ ನೂರಾರು ಕೋಳಿಗಳ ಕತ್ತು ಸೀಳಿ ಮಾಂಸ ಕತ್ತರಿಸುತ್ತಿದ್ದ. ಆದ್ರೆ ಆವತ್ತು ಅವನ ಕತ್ತನ್ನೇ ಬೇರೊಬ್ಬ ಸೀಳಿಬಿಟ್ಟಿದ್ದ. ಕೋಳಿ ಕತ್ತು ಕತ್ತರಿಸೋ ಹಾಗೆ ಅವನನ್ನ ಕತ್ತರಿಸಿದ್ದ. ಆದ್ರೆ ಕತ್ತು ಸೀಳಿ ಕಥೆ ಮುಗಿಸಿದ್ದು ಮಾತ್ರ ಸಹೋದರ. ಅನ್ನ ಹಾಕಿ, ಆಶ್ರಯ ಕೊಟ್ಟ ತಮ್ಮನನ್ನೇ ಆ ಕಿರಾತಕ ಕೊಂದು(Murder) ಮುಗಿಸಿದ. ಅಕ್ಕನ ಗಂಡನೇ ಮೌಲಾ ಹುಸೇನ್‌ನ ಕಥೆ ಮುಗಿಸಿದ್ದ. ಯಾವಾಗ ಈ ವಿಷ್ಯ ಮೌಲಾನ ಹೆಂಡತಿಗೆ ಗೊತ್ತಾಯಿತೋ ದಿಕ್ಕೇ ತೋಚದಂತಾಗಿಬಿಡುತ್ತೆ. 5 ತಿಂಗಳ ಗರ್ಭಿಣಿಯಾಗಿರುವ ಈಕೆ ಈಗ ಅನಾಥಳಾಗಿದ್ದಾಳೆ. ಹೊಟ್ಟಯಲ್ಲಿ ಮಗು ಇಟ್ಟುಕೊಂಡೇ ಗಂಡನ ಶವದ (Deadbody) ಮುಂದೆ ರೋಧಿಸುತ್ತಿದ್ದಾಳೆ. ಅಷ್ಟೇ ಅಲ್ಲ ಅಕ್ಕನ ಗಂಡನ ರಕ್ತ ನೋಡೋದಕ್ಕೆ ಹಪಹಪಿಸುತ್ತಿದ್ದಾಳೆ. ಆದ್ರೆ ಆ ಪಾಪಿ ಇವಳ ಕೈಗೆ ಎಲ್ಲಿ ಸಿಗ್ತಾನೆ.. ಸಹೋದರನಂತಿದ್ದವನ ಕತ್ತು ಸೀಳಿ ಅಂದರ್ ಆಗಿಬಿಟ್ಟಿದ್ದಾನೆ. ಪೊಲೀಸರು (police) ಸಮಾಧಾನಪಡಿಸಿ ಹೀನಾ ಕೌಸರ್ ಮತ್ತು ಆಕೆಯ ಕುಟುಂಬವನ್ನ ಮನೆಗೆ ಕಳುಹಿಸಿದ್ರು. ಮೌಲಾನ ಅಂತ್ಯ ಸಂಸ್ಕಾರ ಮಾಡಲಾಯ್ತು. ಆದ್ರೆ ಇಲ್ಲಿ ಬರೋ ಪ್ರಶ್ನೆ ಅಂದ್ರೆ ಮೌಲಾನನ್ನ ಹೀನಾ ಕೌಸರ್‌ಳ ಅಕ್ಕನ ಗಂಡ ಕೊಂದಿದ್ದೇಕೆ..? ಒಂದೇ ಮನೆಯ ಹೆಣ್ಣುಮಕ್ಕಳನ್ನ ಮದುವೆಯಾಗಿದ್ದ ಅವರಿಬ್ಬರು ಅಣ್ಣತಮ್ಮಂದಿರಂತಿದ್ರು. ವಯಸಲ್ಲಿ ಚಿಕ್ಕವನ್ನಾಗಿದ್ರೂ ಹೆಂಡತಿಯ ಅಕ್ಕನ ಕುಟುಂಬ ಲಾಸ್ನಲ್ಲಿದೆ ಅಂತ ಗಂಡ ಹೆಂಡತಿಯನ್ನ ತಮ್ಮ ಮನೆಗೇ ಕರೆದುಕೊಂಡು ಬಂದು  ಆಶ್ರಯ ಕೊಟ್ಟಿದ್ರು. ಅಷ್ಟೇ ಅಲ್ಲ ತಾನು ಇಟ್ಟಿದ್ದ ಕೋಳಿ ಅಂಗಡಿಯಲ್ಲೇ ಕೆಸಕ್ಕೂ ಸೇರಿಸಿಕೊಂಡ್ರು. ಆದ್ರೆ ಅನ್ನ ತಿಂದ ಮನೆಗೆ ನ್ಯಾಯವಾಗಿರೋದು ಬಿಟ್ಟು ಆ ಮನೆಯ ಒಡೆಯನನ್ನೇ ಮುಗಿಸೋದಕ್ಕೆ ಆತ ರೆಡಿಯಾಗಿಬಿಟ್ಟ. ತನ್ನ ಹೆಂಡತಿ ಮೇಲೆನೇ ಕಣ್ಣು ಹಾಕಿದ್ದಾನೆ ಅನ್ನೊ ಅನುಮಾನದಿಂದ ರಾತ್ರಿ ಮಲಗಿದ್ದಾಗಲೇ ಕತ್ತು ಕೊಯ್ತು ಕೊಂದುಬಿಟ್ಟ.

ಇದನ್ನೂ ವೀಕ್ಷಿಸಿ:  ಪ್ರಕರಣ ಹಿಂಪಡೆಯೋಕೆ ತಯಾರಾಗಿದೆಯಾ ತಂತ್ರ ? ಏನಿದು ಹಳೇ ಹುಬ್ಬಳ್ಳಿ ಗಲಭೆ ಕೇಸ್..?