Asianet Suvarna News Asianet Suvarna News

ಶಾಲೆಗೆ ಹೋದ ಬಾಲಕ ಹೆಣವಾಗಿ ಸಿಕ್ಕ! ಅವಳನ್ನ ಪಡೆಯಲು ಅಮಾಯಕ ಬಾಲಕನನ್ನ ಕೊಂದ!

ಅವರದ್ದು ಊರು ಊರುಗಳಿಗೆ ಹೋಗಿ ಕುರಿಗಳನ್ನ ಮೇಯಿಸಿ ಜೀವನ ಕಟ್ಟಿಕೊಳ್ಳುವ ಕುಟುಂಬ. ಮಕ್ಕಳ ಶಿಕ್ಷಣ ಹಾಳಾಗಬಾರದು ಅಂತಾ ತಂಗಿಯ ಮನೆಯಲ್ಲಿ ತಮ್ಮ ಮೂರೂ ಮಕ್ಕಳನ್ನ ಓದಿಸಲು ಬಿಟ್ಟಿದ್ದ. ತುಂಬಾ ಚೆನ್ನಾಗಿ ಓದುತ್ತಿದ್ದ ಮಗನೊಬ್ಬ ಎಂದಿನಂತೆ ಶಾಲೆಗೆ ಹೋದವ ವಾಪಾಸ್ ಬರಲೇ ಇಲ್ಲ.

Oct 5, 2022, 11:39 AM IST

ಬೆಳಗಾವಿ (ಅ.05): ಅವರದ್ದು ಊರು ಊರುಗಳಿಗೆ ಹೋಗಿ ಕುರಿಗಳನ್ನ ಮೇಯಿಸಿ ಜೀವನ ಕಟ್ಟಿಕೊಳ್ಳುವ ಕುಟುಂಬ. ಮಕ್ಕಳ ಶಿಕ್ಷಣ ಹಾಳಾಗಬಾರದು ಅಂತಾ ತಂಗಿಯ ಮನೆಯಲ್ಲಿ ತಮ್ಮ ಮೂರೂ ಮಕ್ಕಳನ್ನ ಓದಿಸಲು ಬಿಟ್ಟಿದ್ದ. ತುಂಬಾ ಚೆನ್ನಾಗಿ ಓದುತ್ತಿದ್ದ ಮಗನೊಬ್ಬ ಎಂದಿನಂತೆ ಶಾಲೆಗೆ ಹೋದವ ವಾಪಾಸ್ ಬರಲೇ ಇಲ್ಲ. ನಾಪತ್ತೆಯಾದ ಬಾಲಕ ನದಿಯಲ್ಲಿ ಸಿಕ್ಕಿದ್ದು ಶವವಾಗಿ. ರುಂಡು ಮುಂಡ ಬೇರೆಯಾದ ರೀತಿಯಲ್ಲಿ ಸಿಕ್ಕ ಶವದ ತನಿಖೆ ಆರಂಭಿಸಿದ ಪೊಲೀಸರಿಗೆ ಕಾದಿತ್ತು ಶಾಕ್. ಹೀಗೆ ಶಾಲೆಗೆ ಹೋಗಿಬರ್ತೀನಿ ಅಂತ ಹೋದವನು ಹೆಣವಾದ ಬಾಲಕನ ಕಥೆ,  ಬಾಲಕನನ್ನ ಕೊಂದಿದಾದ್ರೂ ಯಾರು? ಕೊಲೆಗೆ ಕಾರಣ ಎನೂ? ಕೊಲೆಯ ರಹಸ್ಯವನ್ನ ಪೊಲೀಸರು ಬೇದಿಸಿದ್ದು ಹೇಗೆ ಇವೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. 

ಶಾಲೆಗೆ ಅಂತ ಹೋದವನು ನಾಲ್ಕು ದಿನಗಳ ನಂತರ ಶವವಾಗಿ ಸಿಗ್ತಾನೆ ಅಂದ್ರೆ ಏನ್ ಹೆಳಬೇಕು. ಇನ್ನೂ ಸಿಕ್ಕ ಮೃತದೇಹದ ಸ್ಥಿತಿ ನೋಡ್ತಿದ್ರೆ ಇದು ಪಕ್ಕಾ ಕೊಲೆ ಅನ್ನೋ ನಿರ್ಧಾರಕ್ಕೆ ಪೊಲೀಸರು ಬಂದಿದ್ರು. ಆದ್ರೆ 11 ವರ್ಷದ ಬಾಲಕನನ್ನ ಕೊಲೆ ಮಾಡುವಂತಹ ತಪ್ಪಾದ್ರು ಆತ ಏನ್ ಮಾಡಿದ..? ನದಿಯಲ್ಲಿ ಸಿಕ್ಕ ಬಾಲಕನ ಶವವನ್ನ ಹೆತ್ತವರಿಗೆ ಹಸ್ತಾಂತರಿಸಿದ ಮೇಲೆ ಪೊಲೀಸರು ತನಿಖೆ ಶುರು ಮಾಡಿದ್ರು. ಆದ್ರೆ ಎಲ್ಲಿಂದ ಶುರು ಮಾಡಬೇಕು ಅನ್ನೋ ಗೊಂದಲ ಅವರಲ್ಲಿತ್ತು. ಹೀಗಾಗಿ ಗ್ರಾಮದ ಅನೇಕರನ್ನ ಕರೆದು ವಿಚಾರಣೆ ಮಾಡಿದ್ರು. ಆಗ ಕೆಲವರು ಒಬ್ಬನ ಹೆಸರು ಹೇಳಿದ್ರು. ಅವರ ಹೇಳಿದ ಹೆಸರಿನ ಹಿಂದೆ ಬಿದ್ರು. ಆತನನ್ನ ಕರೆದುಕೊಂಡು ಬಂದು ಡ್ರಿಲ್ ಮಾಡಿದ್ರು. ಆಗಲೇ ನೋಡಿ ಕೊಲೆಗಾರ ತಗಲಾಕೊಂಡಿದ್ದು. ಬಾಲಕನ ಕೊಲೆಯ ಹಿಂದಿನ ಉದ್ದೇಶವನ್ನ ಬಾಯಿಬಿಟ್ಟಿದ್ದು. 

ಯಾವಾಗ ಮಾಳಪ್ಪನ ಕುಟುಂಬದಿಂದ ತನ್ನ ಪ್ರೇಯಸಿ ದೂರ ಆಗ್ತಿದ್ದಾಳೆ ಅಂತ  ನೂರ್ ಅಹ್ಮದ್ ಆಲೋಚಿಸಿದ್ನೋ, ಅದೇ ಕುಟುಂಬದ ಕುಡಿಯನ್ನ ಕೊಂದು ಮತ್ತೆ ತನ್ನ ಪ್ರೇಯಸಿಯನ್ನ ದಕ್ಕಿಸಿಕೊಳ್ಳಲು ನಿರ್ಧರಿಸುತ್ತಾನೆ. ಅದರಂತೆ ಅವತ್ತು ಎಂದಿನಂತೆ ಶಾಲೆಗೆ ಹೋಗ್ತಿದ್ದ ಮಾಳಪ್ಪನನ್ನ ಅಡ್ಡ ಹಾಕಿದ ನೂರ್ ನೀಟಾಗಿ ಅವನ ಕಥೆ ಮುಗಿಸಿ ನಂತರ ಪೊಲೀಸರ ದಿಕ್ಕು ತಪ್ಪಿಸಲು ಮಾಳಪ್ಪನ ರುಂಡ ಕತ್ತರಿಸಿ ನದಿಗೆ ಬಿಸಾಡಿದ್ದಾನೆ. ಆದ್ರೆ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕಲ್ವಾ..? ನೂರ್ ಅಹ್ಮದ್ ಪೊಲೀರಿಗೆ ತಗ್ಲಾಕೊಂಡಿದ್ದಾನೆ. ಏನೇ ಆದ್ರೂ ತನ್ನ ಅನೈತಿಕ ಸಂಬಂಧಕ್ಕೆ ಒಂದು ಕುಟುಂಬ ಅಡ್ಡಿಯಾಯ್ತು ಅಂತ ಮಾಳಪ್ಪ ಅನ್ನೋ ಏನೂ ಅರಿಯದ ಕಂದಮ್ಮ ಬಲಿಯಾಗಿದ್ದು ಮಾತ್ರ ವಿಪರ್ಯಾಸ. ಸದ್ಯ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.