Asianet Suvarna News Asianet Suvarna News
breaking news image

Bengaluru: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಕೆಲಸಗಾರನಿಂದಲೇ ವೃದ್ಧನ ಭೀಕರ ಹತ್ಯೆ!

ಹಣಕ್ಕಾಗಿ ಕೆಲಸಗಾರ ವೃದ್ಧ ಮಾಲೀಕನನ್ನು ಭೀಕರವಾಗಿ ಹತ್ಯೆಗೈದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಚಾಮರಾಜಪೇಟೆಯ 4ನೇ ಕ್ರಾಸ್‌ನಲ್ಲಿರುವ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಜುಗ್ಗರಾಜ್ ಜೈನ್ (77) ಕೊಲೆಯಾದ ವ್ಯಕ್ತಿ.

ಬೆಂಗಳೂರು (ಮೇ.25): ಹಣಕ್ಕಾಗಿ ಕೆಲಸಗಾರ ವೃದ್ಧ ಮಾಲೀಕನನ್ನು ಭೀಕರವಾಗಿ ಹತ್ಯೆಗೈದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಚಾಮರಾಜಪೇಟೆಯ 4ನೇ ಕ್ರಾಸ್‌ನಲ್ಲಿರುವ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಜುಗ್ಗರಾಜ್ ಜೈನ್ (77) ಕೊಲೆಯಾದ ವ್ಯಕ್ತಿ. ಕೆಲಸಗಾರ ಬಿಜೋರಾಮ್ ಆರೋಪಿಯಾಗಿದ್ದಾನೆ. ವಿಚಾರ ತಿಳಿದ ತಕ್ಷಣ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲಿಸಿದ್ದಾರೆ. ಬಳಿಕ ಹೇಳಿಕೆ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಜುಗ್ಗರಾಜ್ ಜೈನ್ ಮನೆ ಕೆಲಸದವನಿಂದಲೇ ಕೊಲೆ ನಡೆದಿದೆ. 

ಬಿಜೋರಾಮ್ ಎಂಬಾತನಿಂದ ಕೊಲೆ ಮಾಡಲಾಗಿದೆ. ಕೈಕಾಲು ಕಟ್ಟಿ ಹಾಕಿ ಕತ್ತು ಹಿಸುಗಿ ಕೊಲೆ ಮಾಡಿರೋದಾಗಿ ಗೊತ್ತಾಗ್ತಿದೆ. ಮಂಗಳವಾರ ರಾತ್ರಿ ಕೊಲೆ‌ ಮಾಡಿ ಎಸ್ಕೇಪ್ ಆಗಿದ್ದಾನೆ. ಕಳೆದ ಎಂಟು ತಿಂಗಳಿಂದ ಜುಗ್ಗರಾಜ್ ಮನೆಯಲ್ಲಿ ಆರೋಪಿ ಕೆಲಸ ಮಾಡ್ತಿದ್ದ. ಮೃತ ಜುಗ್ಗರಾಜ್ ಗೆ ಪ್ರಕಾಶ್ ಮತ್ತು ಆನಂದ್ ಎಂಬ ಇಬ್ಬರು ಮಕ್ಕಳಿದ್ದು, ಬ್ಯುಸಿನೆಸ್ ಮಾಡುತ್ತಿದ್ದರು. ಎರಡನೇ ಮಗ ಆನಂದ್, ಆತನ ಪತ್ನಿ ಮತ್ತು ಜುಗ್ಗರಾಜ್ ಮೂರು ಜನ ಒಂದೇ ಅಪಾರ್ಟ್ಮೆಂಟ್‌ನಲ್ಲಿಯೇ ಇರುತ್ತಿದ್ದರು. ಬ್ಯುಸಿನೆಸ್‌ನ ಎಲ್ಲಾ ವ್ಯವಹಾರಗಳನ್ನು ಮೃತ ಜುಗ್ಗರಾಜ್ ನೋಡಿಕೊಳ್ಳುತ್ತಿದ್ದರು. 

ಮಗನ ಹೆಂಡತಿಗೆ ಮಾವನಿಂದ ಅಶ್ಲೀಲ ಮೆಸೇಜ್, ಕಿರುಕುಳಕ್ಕೆ ಪ್ರಾಣಬಿಟ್ಟ ಸೊಸೆ!

ಆತನ ಬಳಿಯೇ ಲಾಕರ್ ಕೀಗಳು ಇರುತ್ತಿದ್ದವು. ಜುಗ್ಗರಾಜ್ ಮಗ ಕೆಲಸದ ನಿಮಿತ್ತ ಗೋವಾಗೆ ತೆರಳಿದ್ದರು. ಸೊಸೆ ತನ್ನ ತಾಯಿ ಮನೆಗೆ ಹೋಗಿದ್ದರು. ಮನೆಯಲ್ಲಿ ಜುಗ್ಗರಾಜ್ ಮಾತ್ರವೇ ಇದ್ದ ಸಂದರ್ಭ ಅಂಗಡಿ ಕೆಲಸಗಾರ ಬಿಜೋರಾಮ್ ಮಾಲೀಕನ ಹತ್ಯೆಗೈದಿದ್ದಾನೆ. ನಂತರ ಮನೆಯಲ್ಲಿದ್ದ ಚಿನ್ನಾಭರಣಗಳನ್ನ ಕದ್ದು ಎಸ್ಕೇಪ್ ಆಗಿದ್ದಾನೆ. ನಾಲ್ಕು ಬ್ಯಾಗ್‌ಗಳಲ್ಲಿ ಚಿನ್ನಾಭರಣಗಳನ್ನ ತುಂಬಿಕೊಂಡು ಹೋಗಿದ್ದು, 25ಕೆಜಿ ಬೆಳ್ಳಿಯನ್ನು ಅಪಾರ್ಟ್ಮೆಂಟ್‌ನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

Video Top Stories