ಮಾತಿಗೆ ಮಾತು ಬೆಳೆದು ಚಾಕು ಹಾಕೇಬಿಟ್ರು..! ತಮ್ಮನ ಎದುರಲ್ಲೇ ಅಣ್ಣನನ್ನ ಕೊಂದು ಮುಗಿಸಿದ್ರು..!

ಮನೆಗೆ ಆಧಾರವಾಗಿದ್ದವನೇ ಹೆಣವಾಗಿ ಹೋಗಿದ್ದ..!
ನ್ಯೂ ಇಯರ್ ಸೆಲಬ್ರೇಷನ್ ಮುಂಚೆಯೇ ಬಿತ್ತು ಹೆಣ..!
ಟೈಟ್ ಆಗಿದ್ದವನಿಗೆ ಪಕ್ಕಕ್ಕೆ ಸರಿ ಅಂದಿದ್ದೇ ತಪ್ಪಾಯ್ತು..!

First Published Jan 2, 2024, 2:56 PM IST | Last Updated Jan 2, 2024, 3:16 PM IST

ಅವರಿಬ್ಬರು ಅಣ್ಣತಮ್ಮಂದಿರು. ಮನೆಗೆ ಅವರೇ ಆಧಾರ. ಆದ್ರೆ ನಿನ್ನೆ  ಮನೆ ಮಂದಿಯಲ್ಲಾ ಹೊಸವರ್ಷವನ್ನ(New year)  ಸಂತೋಷದಿಂದ ಕೇಕ್ ಕಟ್ ಮಾಡಿ ಆಚರಣೆ ಮಾಡೋಣ ಅಂತ ಇಬ್ಬರೂ ಬೇಕರಿಗೆ ಹೋಗಿದ್ರು. ಆದ್ರೆ ಕೇಕ್ (Cake)ತರಲು ಹೋದ ಅಣ್ಣ ತಮ್ಮಂದಿರಿಗೆ ಚಾಕು(Knife) ಇರಿತವಾಗಿತ್ತು. ಅಣ್ಣ ಅಲ್ಲೇ ಸ್ಪಾಟ್ನಲ್ಲಿ ಹೆಣವಾಗಿದ್ದ.. ತಮ್ಮನ ಎದುರಲ್ಲೇ ಹಂತಕರು ಅಣ್ಣನನ್ನ ಕೊಂದು ಮುಗಿಸಿದ್ರು.ಇನ್ನೂ ಕೇಸ್ನ ತನಿಖೆ ನಡೆಸಿದ ಪೊಲೀಸರು(Police) ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹಂತಕರನ್ನ ಎತ್ತಾಕೊಂಡು ಬಂದಿದ್ರು.ಹೊಸ ವರ್ಷದ ಆಚರಣೆ ಮಾಡಲು ಅಣ್ಣ ತಮ್ಮಂದಿರು, ಕೇಕ್ ತರಲು ಹೋದಾಗ ಈ ಕಿರಾತಕರ ಕೈಗೆ ಸಿಕ್ಕಿಹಾಕಿಕೊಂಡುಬಿಟ್ಟಿದ್ರು. ಇವರೋ ಎಲ್ಲಾ ಕ್ರೈಂ ಹಿನ್ನಲೆ ಹೊಂದವರೇ.. ಆವತ್ತು ಕಂಠ ಪೂರ್ತಿ ಕುಡಿದು ಇವರು ಹೋಗಿದ್ದ ಬೇಕರಿಯ ಎದುರೇ ಟೈಟ್ ಆಗಿ ಮಲಗಿಬಿಟ್ಟಿದ್ರು. 

ಕೇಕ್ ಖರೀಧಿಸಿ ಇನ್ನೇನು ಮನೆಗೆ ಹೋಗಿ ಸೆಲಬ್ರೇಟ್ ಮಾಡಬೇಕು.. ಆದ್ರೆ ಕೇಕ್ ತಗೆದುಕೊಂಡು ವಾಪಸ್ ಮನೆಗೆ ಹೋಗಬೇಕು ಅಂತ ಬೈಕ್ ಸ್ಟಾರ್ಟ್ ಮಾಡಬೇಕು ಅನ್ನುವಾಗ್ಲೇ ಬೈಕ್ ಅಡ್ಡಲಾಗಿ ಒಬ್ಬ ಕಿರಾತಕ ಟೈಟ್ ಆಗಿ ಮಲಗಿಬಿಟ್ಟಿದ್ದ. ಎದ್ದು ಸೈಡ್ಗೆ ಹೋಗಪ್ಪ ಅಂದಿದ್ದಷ್ಟೇ ಅವನ ಜೊತೆ ಇದ್ದ ಹುಡುಗರು ಅಣ್ಣತಮ್ಮಂದಿರ ಮೇಲೆ ಎರಗಿ ಬಿದ್ದುಬಿಟ್ಟಿದ್ರು. ಮಾತಿಗೆ ಮಾತು ಬೆಳೆದು ಜಗಳ ಶುರುವಾಯ್ತು. ಇದೇ ಜಗಳ ವಿಕೋಪಕ್ಕೆ ಹೋದಾಗ ಹಂತಕರು ತಮ್ಮಲ್ಲಿದ್ದ ಚಾಕು ತೆಗೆದುಕೊಂಡು ಅಣ್ಣ ತಮ್ಮಂದಿರ ಮೇಲೆ ಮನಸ್ಸೋಇಚ್ಛೆ ಬೀಸಲು ಆರಂಬಿಸಿದ್ರು. ಈ ವೇಳೆ ಅಣ್ಣ ಅಲ್ಲೇ ಕುಸಿದುಬಿದ್ದು ಮೃತಪಟ್ಟರೆ ತಮ್ಮ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಇದನ್ನೂ ವೀಕ್ಷಿಸಿ:  ನನ್ನ ರಾಜೀನಾಮೆ ಕೇಳಲು ನೀವು ಯಾರು ? ನಿಮಗೆ ಏನ್ ಯೋಗ್ಯತೆ ಇದೆ ?: ಮಧು ಬಂಗಾರಪ್ಪ