Suvarna FIR: ಪುಡಿ ಲೀಡರ್ ಇನಿಯನ ತೋಳ ತೆಕ್ಕೆಗಾಗಿ ಹೆತ್ತ ಮಗನನ್ನೇ ಮುಗಿಸಿದಳು!
* ಜಗತ್ತಿನಲ್ಲಿ ಇಂಥ ತಾಯಿಯೂ ಇರ್ತಾರೆ!
* ಮಿಸ್ಸಿಂಗ್ ಪ್ರಕರಣ ಅಲ್ಲ ಇದೊಂದು ಕೊಲೆ
* ಮಗನ ಹತ್ಯೆ ಮಾಡಿ ಶವ ಹೊಲದಲ್ಲಿ ಹೂಳಲಾಗಿತ್ತು
* ಇನಿಯನ ತೋಳ ತೆಕ್ಕೆಗಾಗಿ ಹೆತ್ತ ಮಗನನ್ನೇ ಮುಗಿಸಿದಳು
ಕೊಪ್ಪಳ(ಏ. 05) ಜಗತ್ತಿನಲ್ಲಿ ಕೆಟ್ಟ ಮಗ, ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ (Mother) ಇರಲ್ಲ ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ಮಹಾತಾಯಿ ಇನಿಯನಿಗಾಗಿ ಹೆತ್ತ ಮಗನನ್ನೇ (Murder) ಮುಗಿಸಿದ್ದಾಳೆ.
ತಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ಮಗಳನ್ನು ಕೊಂದ ಅಪ್ಪ!
ಹೆತ್ತ ಮಗನನ್ನೇ ಮುಗಿಸಿ ಮಣ್ಣಿನಲ್ಲಿ ಮುಚ್ಚಿದ್ದಳು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ (Police) ಒಂದೊಂದೆ ರೋಚಕ ಮಾಹಿತಿಗಳು ಸಿಗುತ್ತವೆ. ಆತನನ್ನು ಕೊಲೆ ಮಾಡಿ ಹೊಲದಲ್ಲಿ ಹೂತು ಹಾಕಲಾಗಿತ್ತು.