Asianet Suvarna News Asianet Suvarna News

ಬೆಂಗಳೂರು; ದುಷ್ಕರ್ಮಿಗಳ ಆಟಾಟೋಪ, ಕರ್ಫ್ಯೂ ವೇಳೆ ಪುರಾತನ ದೇವಾಲಯ ಧ್ವಂಸ

ಪುರಾತನ ದೇಗುಲ ಧ್ವಂಸ/  ಪುರಾತನಕಾಲದ  ದೇವಸ್ಥಾನಕ್ಕೂ ಕಂಠಕವಾಯ್ತು ಕೊರೋನಾ ಕರ್ಫ್ಯೂ/ ಕೊರೋನಾ ಕರ್ಫ್ಯೂ ವೇಳೆ  ದೇವಸ್ಥಾನ ಧ್ವಂಸಗೈದ ದುಷ್ಕರ್ಮಿಗಳು/ ಕಿಡಿಗೇಡಿಗಳಿಂದ ಪುರಾತನ ಪ್ರಸಿದ್ದ ಜುಂಜಪ್ಪ ಸ್ವಾಮಿ ದೇವಸ್ಥಾನ ಧ್ವಂಸ / ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಇರುವ ದೇವಸ್ಥಾನ

ಬೆಂಗಳೂರು (ಏ. 29) ಪುರಾತನಕಾಲದ  ದೇವಸ್ಥಾನಕ್ಕೂ ಕೊರೋನಾ ಕರ್ಫ್ಯೂ ಕಂಠಕವಾಗಿದೆ. ಕೊರೋನಾ ಕರ್ಫ್ಯೂ ವೇಳೆ  ದೇವಸ್ಥಾನವನ್ನು ದುಷ್ಕರ್ಮಿಗಳು ಧ್ವಂಸಮಾಡಿದ್ದಾರೆ.

ಜಾಗ ಕಬಳಿಸಲು ಡಾ. ರಾಜ್ ಹೆಸರನ್ನು ಬಳಸಿಕೊಂಡ್ರಾ?

ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಇರುವ ಪುರಾತನ ಪ್ರಸಿದ್ದ ಜುಂಜಪ್ಪ ಸ್ವಾಮಿ ದೇವಸ್ಥಾನದ ಮೇಲೆ ದುಷ್ಕರ್ಮಿಗಳು ಆಟಾಟೋಪ ನಡೆಸಿದ್ದಾರೆ. ತಡರಾತ್ರಿ ಸುಮಾರು ಎರಡು ಗಂಟೆ ವೇಳೆ ಜೆಸಿಬಿ ಯಂತ್ರದ‌ ಮೂಲಕ ದೇಗುಲ ನೆಲಸಮ ಮಾಡಿರುವ ದೃಶ್ಯ ಸೆರೆಯಾಗಿದೆ.  ಹದಿನೈದರಿಂದ ಇಪ್ಪತ್ತು ದುಷ್ಕರ್ಮಿಗಳ ತಂಡ ಈ  ಕೆಲಸ ಮಾಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Video Top Stories