Asianet Suvarna News Asianet Suvarna News

ಮಂಗಳೂರು; ಸರ್ಕಾರಿ ಕಚೇರಿಯಲ್ಲಿದ್ದ ಮೂವರು ಮಹಿಳೆಯರ ಮೇಲೆ ಮಚ್ಚು ಬೀಸಿದ!

* ಮಂಗಳೂರಿನಲ್ಲಿ ಮೂವರು ಮಹಿಳೆಯರ ಮೇಲೆ ಮಚ್ಚು ಬೀಸಿದ
* ಸರ್ಕಾರಿ ಕಚೇರಿಯಲ್ಲಿದ್ದ ಮಹಿಳೆಯರ ಮೇಲೆ ಅಪರಿಚಿತನಿಂದ ದಾಳಿ
* ದಾಳಿ ಮಾಡಿ ಪರಾರಿಯಾಗುತ್ತಿದ್ದವ ಸೆರೆ ಸಿಕ್ಕ

Sep 20, 2021, 5:57 PM IST

ಮಂಗಳೂರು(ಸೆ. 20) ಮಂಗಳೂರಿನಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ಅಪರಚಿತ ವ್ಯಕ್ತಿ ದಾಳಿ ಮಾಡಿದ್ದಾನೆ. ಸರ್ಕಾರಿ ಕಚೇರಿಯಲ್ಲಿದ್ದ ಮೂವರು ಮಹಿಳೆಯರ ಮೇಲೆ  ಮಚ್ಚಿನಿಂದ ದಾಳಿ ಮಾಡಿದ್ದಾನೆ.  ನಿರ್ಮಲ, ವೀಣಾ ರಾಯ್ ಮತ್ತು ಗುಣವತಿ ಎಂಬುವರ ಮೇಲೆ ಹಲ್ಲೆ ಮಾಡಿದ್ದಾನೆ.

ಮಾಯಾಂಗನೆ ಮೋಹಕ್ಕೆ ಸಿಲುಕಿ ಮಿಲಿಟರಿ ಮಾಹಿತಿ ಸೋರಿಕೆ ಮಾಡಿದ್ದ!

ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹಿಡಿಯಲಾಗಿದೆ. ಹಲ್ಲೆಗೆ ಒಳಗಾಗಿರುವ ನಿರ್ಮಲಾ ಸ್ಥಿತಿ ಗಂಭೀರವಾಗಿದೆ. ಪ್ರಕರಣಕ್ಕೆ ಕಾರಣ ತಿಳಿದು ಬಂದಿಲ್ಲ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.