Asianet Suvarna News Asianet Suvarna News

ಪಬ್‌ಜೀ ಆಟದಲ್ಲಿ ಸೋಲು, ಬಾಲಕನ ಭೀಕರ ಕೊಲೆ

ಆನ್‌ಲೈನ್‌ ಗೇಮ್‌ ಪಬ್‌ಜೀ ಆಟದ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕರೊಳಗೆ ಚಕಮಕಿ ನಡೆದು ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಬಳಿ ಸಂಭವಿಸಿದೆ.

ಮಂಗಳೂರು (ಏ. 05): ಆನ್‌ಲೈನ್‌ ಗೇಮ್‌ ಪಬ್‌ಜೀ ಆಟದ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕರೊಳಗೆ ಚಕಮಕಿ ನಡೆದು ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಬಳಿ ಸಂಭವಿಸಿದೆ.

ಕೊರಗಜ್ಜ ಬಳಿಕ ಮಂಗಳೂರಿನ ಪಿಲಿಚಾಮುಂಡಿ ದೇಗುಲ ಹುಂಡಿಯಲ್ಲಿ ಕಾಂಡೋಮ್ ಪತ್ತೆ!

ಉಳ್ಳಾಲದ ಕೆ.ಸಿ.ರೋಡ್‌ ನಿವಾಸಿ ಮೊಹಮ್ಮದ್‌ ಆಕೀಫ್‌(12) ಎಂಬಾತನೇ ಭೀಕರ ಹತ್ಯೆಗೆ ಒಳಗಾದ ಬಾಲಕ. ಈತನ ಹತ್ಯೆ ನಡೆಸಿದಾತ 17 ವರ್ಷದ ಬಾಲಕ. ಬಾಲಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆಗೀಡಾದ ಆಕೀಫ್‌ ಸ್ಥಳೀಯ ಫಲಾಹ್‌ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ. ಏನಿದು ಪಬ್‌ಜಿ ಕತೆ..? ನೋಡಿ