Vijayapura Crime ಅಪ್ರಾಪ್ತ ಬಾಲಕನ ಬೆತ್ತಲಾಗಿಸಿ ಹಲ್ಲೆ, ಬಸವನಬಾಗೇವಾಡಿಯಲ್ಲಿ ಅಮಾನವೀಯ ಕೃತ್ಯ!
- ವಿಜಯಪುರದ ಬಸವನಬಾಗೇವಾಡಿಯಲ್ಲಿ ನಡೆದ ಘಟನೆ
- ಕಂಬಕ್ಕೆ ಕಟ್ಟಿ ಬಾಲಕನ ಬೆತ್ತಲಾಗಿಸಿ ಹಲ್ಲೆ
- ಘಟನೆ ಸೆರೆ ಹಿಡಿದ ಸ್ಥಳೀಯರು, ದೂರು ದಾಖಲು
ವಿಜಯಪುರ(ಮಾ.23) ಅಪ್ರಾಪ್ತ ಬಾಲಕನನ್ನು ಬೆತ್ತಲಾಗಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ವಿಜಯಪುರದ ಬಸವನಬಾಗೇವಾಡಿಯಲ್ಲಿ ನಡೆದಿದೆ. ಅಶ್ಲೀಲ ಪದಗಳಿಂದ ಬೈದಿದ್ದಾನೆ ಅನ್ನೋ ಕಾರಣಕ್ಕೆ ಹನುಮಂತರಾಯ ಮಡಿಕೇಶ್ವರ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈ ಅಮಾನವೀಯ ಘಟನೆಯನ್ನು ಸ್ಥಳೀಯರು ಮೊಬೈಲ್ ಮೂಲಕ ಸೆರೆ ಹಿಡಿದ್ದಾರೆ.