ಕಾರಿನ ಮೇಲೆ ಪಟಾಕಿ ಸಿಡಿಸುತ್ತಾ ಹುಚ್ಚಾಟ, ವೈರಲ್ ವಿಡಿಯೋ ಬೆನ್ನಲ್ಲೇ ಕಾರು ಸೀಜ್!

ದೀಪಾವಳಿಗೆ ಭಯಾನಕ ರೀತಿಯಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವೈರಲ್ ವಿಡಿಯೋದಿಂದ ಈ ಘಟನೆ ಬೆಳಕಿಗೆ ಬಂದಿದೆ.

First Published Oct 27, 2022, 8:06 PM IST | Last Updated Oct 27, 2022, 8:06 PM IST

ಮಣಿಪಾಲ(ಅ.27): ಕಾರಿನ ಮೇಲೆ ಪಟಾಕಿ ಹೆಚ್ಚಿಕೊಂಡು ತಿರುಗಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ. ಕಾರಿನ ಮೇಲೆ ಪಟಾಕಿಗೆ ಬೆಂಕಿ ಹಚ್ಚಿ ಇಡಲಾಗಿದೆ. ಬಳಿಕ ಕಾರಿನೊಂದಿಗೆ ನಗರ ತಿರುಗಾಡಿದ್ದಾನೆ. ಈ ವೇಳೆ ಒಂದೊಂದೆ ಪಟಾಕಿಗಳು ಬಾನೆತ್ತರಲ್ಲಿ ಸಿಡಿಯುತ್ತಿತ್ತು. ಈ ಘಟಮೆ ಮಣಿಪಾಲದಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಹುಚ್ಚಾಟ ಮೆರೆದ ಚಾಲಕ ವಿಶಾಲ್ ಕೊಹ್ಲಿಯನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.