ಮಂಗಳೂರು ಬ್ಲಾಸ್ಟ್ ಪ್ರಕರಣ: ಶಾರೀಕ್ ಜೊತೆಯಿದ್ದ ಇನ್ನೊಬ್ಬ ಯಾರು?
ಮಂಗಳೂರು ಬ್ಲಾಸ್ಟ್ ಪ್ರಕರಣದ ಕುರಿತು ಮತ್ತೊಂದು ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಶಾರೀಕ್ ಜೊತೆ ಮತ್ತೊಬ್ಬ ಇರುವ ಮಾಹಿತಿ ಲಭ್ಯವಾಗಿದೆ.
ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿಗೆ ಒಬ್ಬನಲ್ಲ ಇಬ್ಬರು ಉಗ್ರರು ಬಂದಿದ್ದಾರೆ. ಸಿಸಿಟಿವಿಯಲ್ಲಿ ಶಾರೀಕ್ ಜೊತೆ ಮತ್ತೊಬ್ಬ ಇರುವ ದೃಶ್ಯ ಲಭ್ಯವಾಗಿದೆ. ಪಡೀಲ್ ಬಸ್ ನಿಲ್ದಾಣದಲ್ಲಿ ಇಳಿದಿದ್ದ ಉಗ್ರ ಶಾರೀಕ್ ಕೆಂಪು ಶರ್ಟ್ ಹಾಕಿದ್ದ. ವೈನ್ ಶಾಪ್ ಸಿಸಿಟಿವಿಯಲ್ಲಿ ಶಾರೀಕ್ ದೃಶ್ಯ ಸೆಯಾಗಿದ್ದು, ಅವನ ಜೊತೆ ಮತ್ತೊಬ್ಬ ಮಂಗಳೂರಿಗೆ ಬಂದಿರುವ ಸಾಧ್ಯತೆ ಇದೆ. ಪಡೀಲ್ ಬಸ್ ನಿಲ್ದಾಣದಲ್ಲಿ ಇಳಿದಿದ್ದ ಉಗ್ರ ಶಾರೀಕ್, ರೂಟ್ ಮ್ಯಾಪ್ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.