Asianet Suvarna News Asianet Suvarna News

ಕಾಲೇಜಿನಿಂದ ಎಸ್ಕೇಪ್, ಕೊರಳಲ್ಲಿ ಅರಶಿಣ ಕೊಂಬು, ಮಲೆನಾಡಿನಲ್ಲೊಂದು ಪ್ರೇಮ ಪುರಾಣ!

Sep 18, 2021, 5:34 PM IST

ಶಿವಮೊಗ್ಗ (ಸೆ. 18):  ಆಕೆ 21 ರ ಚೆಲುವೆ. ಬಿಎಸ್‌ಸಿ ವಿದ್ಯಾರ್ಥಿನಿ. ಸ್ಥಿತಿವಂತ ಲಿಂಗಾಯತ ಕುಟುಂಬ. ಅಂದು ಸೆ. 14. ಸ್ವಾತಿ ಎಕ್ಸಾಂಗೆ ರೆಡಿಯಾಗಿ ಕಾಲೇಜಿಗೆ ಬಂದಿದ್ದಾಳೆ. ಪರೀಕ್ಷೆ ಮುಗಿಸಿ ಮನೆಗೆ ಬರಬೇಕಾಗಿದ್ದ ಮಗಳು ಎಷ್ಟೋತ್ತಾದರೂ ಬರುವುದಿಲ್ಲ.

ಹುಣಸೋಡು ಸ್ಫೋಟ ಪ್ರಕರಣ: ಕಣ್ಮರೆಯಾಗಿದ್ದು ಇಬ್ಬರಲ್ಲ, ಮೂವರು, ಸುಳಿವು ಮಾತ್ರ ಸಿಗ್ತಿಲ್ಲ!

ಸ್ವಾತಿ ಮನೆಯವರು ಮಗಳು ಮಿಸ್ಸಿಂಗ್ ಆಗಿರುವುದಾಗಿ ದೂರು ಕೊಡುತ್ತಾರೆ. ಪೊಲೀಸರು ತನಿಖೆ ಶುರು ಮಾಡುತ್ತಾರೆ. ಆಗ ಸ್ವಾತಿ, ನಟೇಶ್ ಎಂಬಾತನ ಜೊತೆಗಿರುವ ವಿಡಿಯೋವನ್ನು ಕಳುಹಿಸುತ್ತಾಳೆ. ಇಲ್ಲಿಂದ ಇಡೀ ಪ್ರಕರಣ ತಿರುವುದು ತೆಗೆದುಕೊಳ್ಳುತ್ತದೆ.