Asianet Suvarna News Asianet Suvarna News

ಬೆಂಗಳೂರು: ಐಷಾರಾಮಿ ಕಾರು ಪೊಲೀಸ್ ಚೌಕಿಗೆ ಡಿಕ್ಕಿ, ಫನ್ ವರ್ಲ್ಡ್ ಮಾಲೀಕನ ಮಗನಿಂದ ಫನ್?

ಫನ್ ವರ್ಲ್ಡ್ ಮಾಲೀಕನ ಮಗನಿಂದ ಫನ್? ಬೇಕಂತಲೇ ಕಾರು ಡಿಕ್ಕಿ ಹೊಡೆಸಲಾಯಿತಾ? ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ/ ಪೊಲೀಸರಿಂದ ಸಕಲ ಪರಿಶೀಲನೆ

ಬೆಂಗಳೂರು[ಫೆ. 09]  ಬೆಂಗಳೂರಿನಲ್ಲಿ ಪೊಲೀಸ್ ಚೌಕಿಗೆ ಐಶಾರಾಮಿ ಕಾರು ಡಿಕ್ಕಿಯಾಗಿದ್ದು  ಫನ್ ವರ್ಲ್ಡ್ ಓನರ್ ಮಗ ಸನ್ನಿ ಎಂಬಾತನಿಂದ ಉದ್ದೇಶಪೂರ್ವಕವಾಗಿ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಹಿಟ್ ಆ್ಯಂಡ್ ರನ್ ; ಬೈಕ್ ಗೆ ಡಿಕ್ಕಿ ಹೊಡೆದು ಪ್ರಭಾವಿ ಶಾಸಕನ ಪುತ್ರನ ಕಾರು ಎಸ್ಕೇಪ್

ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಬಳಿ ಘಟನೆ ನಡೆದಿದ್ದು ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ  ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಫನ್ ವರ್ಲ್ಡ್ ಮಾಲೀಕನ ಮಗನಿಂದ ಚಾಲೆಂಜ್ ಗಾಗಿ ಕೃತ್ಯ ನಡಿಯಿತಾ ಎಂಬ ಅನುಮಾನ ಮೂಡಿದೆ. ಕಾರು ಡಿಕ್ಕಿ ಮಾಡಲು ಸ್ನೇಹಿತರ ಬಳಿ ಮಾಡಿದ್ನಂತೆ ಚಾಲೆಂಜ್ ಮಾಡಿ  ನಂತರ ಡಿಕ್ಕಿಯಾದ ಮೇಲೆ  ಥಮ್ಸ್ ಅಪ್ ಮಾಡಿರುವ ಸನ್ನಿ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ.

Video Top Stories