Video: 'ಚಿಲ್ಲರೆ' ವಿಷಯಕ್ಕೆ ಪ್ರಯಾಣಿಕನ ತಲೆ ಬುರುಡೆ ಓಪನ್
ಪಾವಗಡದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಕನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು-ಕೊರಟಗೆರೆ ಹೆದ್ದಾರಿಯ ಚಿಕ್ಕಪಾಲನಹಳ್ಳಿ ಬಳಿ ನಡೆದಿದೆ.
ತುಮಕೂರು, [ಡಿ.02]: ಪಾವಗಡದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಕನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು-ಕೊರಟಗೆರೆ ಹೆದ್ದಾರಿಯ ಚಿಕ್ಕಪಾಲನಹಳ್ಳಿ ಬಳಿ ನಡೆದಿದೆ.
ನಾಗೇನಹಳ್ಳಿ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಕಂಬಯ್ಯ ಎಂಬ ವ್ಯಕ್ತಿ ಮಾಕಳಿಗೆ ಟಿಕೆಟ್ ಪಡೆಯಲು ಹಣ ನೀಡಿದ್ದಾರೆ. ಟಿಕೆಟ್ ಹಣದಲ್ಲಿ ಒಂದು ರೂಪಾಯಿ ಚಿಲ್ಲರೆ ಕಡಿಮೆ ಇದ್ದಿದ್ದಕ್ಕೆ ಕಂಡಕ್ಟರ್ ಹಾಗೂ ಕಂಬಯ್ಯ ನಡುವೆ ಪರಸ್ಪರ ವಾಗ್ವಾದ ಶುರುವಾಗಿದೆ. ಬಳಿಕ ಕಂಡಕ್ಟರ್ ಟಿಕೆಟ್ ಮಿಷಿನ್ ನಿಂದ ಕಂಬಯ್ಯನ ತಲೆಗೆ ಹೊಡೆದಿದ್ದಾನೆ.
ಇದರಿಂದ ತಲೆಯಿಂದ ರಕ್ತ ಸುರಿದಿದೆ. ಇದನ್ನು ಕಂಡ ಸಹ ಪ್ರಯಾಣಿಕರು ಬಸ್ ಅನ್ನು ರಸ್ತೆಯಲ್ಲಿಯೇ ನಿಲ್ಲಿಸಿ ನಿರ್ವಾಹಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.