Asianet Suvarna News Asianet Suvarna News

ಬೆಂಗಳೂರಿನಲ್ಲಿ ಪಾಕ್ ಗೂಢಚಾರಿ.. ಬಂಧಿಸಿದ ಬಗೆ ತಿಳಿಸಿದ ಆರಗ

* ದೇಶದ ಮಿಲಿಟರಿ  ಮಾಹಿತಿ  ವೈರಿಗಳಿಗೆ ಕಳಿಸುತ್ತಿದ್ದ ಕಿರಾತಕ
* ದೇಶದ ಪ್ರಮುಖ ಸ್ಥಳ, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋ ತೆಗೆದು ಕಳಿಸುತ್ತಿದ್ದ
* ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ವ್ಯಕ್ತಿ ಬಂಧನ
*ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಬೆಂಗಳೂರು (ಸೆ.20):  ದೇಶದ ಮಿಲಿಟರಿ ಮಾಹಿತಿಯನ್ನು ವೈರಿಗಳಿಗೆ ಲೀಕ್ ಮಾಡುತ್ತಿದ್ದ  ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ  ಬಂಧಿಸಲಾಗಿದೆ. ಕಿರಾತಕ ಜೀತೇಂದ್ರ ರಾಥೋಡ್ ಸೇನಾ ಯುನಿಫಾರ್ಮ್ ಸಹ ಇಟ್ಟುಕೊಂಡಿದ್ದು ಸೆರೆ ಸಿಕ್ಕಿದ್ದಾನೆ.

ಮಾಯಾಂಗನೆ ಮೋಹಕ್ಕೆ ಸಿಲುಕಿ ಮಿಲಿಟರಿ ಮಾಹಿತಿ ಸೋರಿಕೆ ಮಾಡಿದ್ದ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಮಿಲಿಟರಿ ಇಂಟಲಿಜನ್ಸ್ ನೀಡಿದ ಮಾಹಿತಿ ಅನ್ವಯ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಮುಂದಿನ ವಿಚಾರಣೆ ನಡೆಸಿ ಇದರ ಹಿಂದಿನ ಜಾಲ ಪತ್ತೆ ಮಾಡಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.  ಬಂಧಿತ  ರಾಜಸ್ಥಾನದ ಬಾರ್ಮರ್ ಹಳ್ಳಿಯವನಾಗಿದ್ದು, ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ.  ವೈರಿಗಳು ಯುವತಿ  ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಸೃಷ್ಟಿ ಮಾಡಿಕೊಂಡು ಈತನನ್ನು ಸಂಪರ್ಕ ಮಾಡಿದ್ದರು. 

 

Video Top Stories