ತುಪ್ಪದ ರಾಣಿಯಲ್ಲ, ಡ್ರಗ್ಗಿಣಿ; 'ಐ ನೀಡ್ ಮೋರ್' ಎಂದು ರಾಗಿಣಿ ಕಳಿಸಿದ್ಯಾರಿಗೆ?
ಮಾದಕ ವಸ್ತು ಖರೀದಿಗೆ ರಾಗಿಣಿ ಲಕ್ಷಾಂತರ ಹಣ ವ್ಯಯಿಸಿದ್ದು, ಆಫ್ರಿಕಾ ಮೂಲದ ಪೆಡ್ಲರ್‌ನಿಂದ ಎಲ್‌ಎಸ್‌ಡಿ ಮಾತ್ರೆಗೆ ತಲಾ .3 ಸಾವಿರ ಕೊಟ್ಟು ಖರೀದಿಸುತ್ತಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬೆಂಗಳೂರು (ಸೆ. 08): ಮಾದಕ ವಸ್ತು ಖರೀದಿಗೆ ರಾಗಿಣಿ ಲಕ್ಷಾಂತರ ಹಣ ವ್ಯಯಿಸಿದ್ದು, ಆಫ್ರಿಕಾ ಮೂಲದ ಪೆಡ್ಲರ್‌ನಿಂದ ಎಲ್‌ಎಸ್‌ಡಿ ಮಾತ್ರೆಗೆ ತಲಾ .3 ಸಾವಿರ ಕೊಟ್ಟು ಖರೀದಿಸುತ್ತಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಡ್ರಗ್ಸ್ ಖರೀದಿ ಸಂಬಂಧ ರಾಗಿಣಿ ಮತ್ತು ಲೂಮ್ ಮಧ್ಯೆ ನಡೆದಿರುವ ವಾಟ್ಸ್ ಆಪ್ ಚಾಟಿಂಗ್ ಸಿಸಿಬಿಗೆ ಲಭ್ಯವಾಗಿದೆ.
ಡ್ರಗ್ ಆರೋಪಿ ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್..!
ಅದರಲ್ಲಿ ‘ಐ ನೀಡ್ ಮೋರ್’ ಎಂದು ರಾಗಿಣಿ ತನ್ನ ಹುಟ್ಟುಹಬ್ಬದ ಆಚರಣೆಗೂ ಮುನ್ನ ಕಳುಹಿಸಿರುವ ಸಂದೇಶವು ಡ್ರಗ್ಸ್ ಖರೀದಿಗೆ ಸಂಬಂಧಿಸಿದ್ದಾಗಿರಬಹುದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆ.24ರಂದು ರಾಗಿಣಿ ಹುಟ್ಟಹಬ್ಬವಿತ್ತು. ಆಗ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು. ಇದಕ್ಕಾಗಿ ಆ.22, 23 ಹಾಗೂ 24ರಂದು ಆಕೆ ಡ್ರಗ್ಸ್ ಖರೀದಿಸಿದ್ದರು ಎನ್ನಲಾಗಿದೆ. ರಾಗಿಣಿ ಡ್ರಗ್ ಡೀಲ್ ಡಿಟೇಲ್ಸ್ ಇಲ್ಲಿದೆ ನೋಡಿ...!