Asianet Suvarna News Asianet Suvarna News

IT Raid: ಅಧಿಕಾರಿಗಳ ಅಕ್ರಮ ಸಂಪತ್ತಿನ ಬೆನ್ನತ್ತಿದ ಎಸಿಬಿ, ಇತ್ತ ಮಾಜಿ ಶಾಸಕರೊಬ್ಬರ ಮೇಲೆ ಐಟಿ ದಾಳಿ

Nov 25, 2021, 7:20 PM IST

ತುಮಕೂರು, (ನ.25): ರಾಜ್ಯದಲ್ಲಿ ಎಸಿಬಿ ದಾಳಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಕಡೆಗಳಲ್ಲಿ ಎಸಿಬಿ (ACB raid) ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದೆ.

ACB Raid:ಪೈಪ್‍ನಲ್ಲಿ ಹಣ ತುರುಕಿದ್ದ ಜೆಇ ಅಕ್ರಮ ಸಂಪತ್ತು, ಅಚ್ಚರಿಯ ಮಾಹಿತಿ ಬಹಿರಂಗ!

 408 ಎಸಿಬಿ ಅಧಿಕಾರಿಗಳು ಅಕ್ರಮ ಸಂಪತ್ತಿನ ಬೆನ್ನ ಹತ್ತಿ ಹೊರಟಿದ್ದಾರೆ. ಮತ್ತೊಂದೆಡೆ ಆದಾಯ ತೆರಿಗೆ ಅಧಿಕಾರಿಗಳು (IT Raid) ಮಾಜಿ ಶಾಸಕರೊಬ್ಬರ ಮನೆ, ಕಚೇರಿ ಹಾಗೂ ಅಂಗಡಿಗಳ ಮೇಲೆ ಐಟಿ ದಾಳಿ ನಡೆಸಿದೆ.