Asianet Suvarna News Asianet Suvarna News

ಗುಂಡ್ಲುಪೇಟೆ, ಶಿವನಸಮುದ್ರ ಅರಣ್ಯದಲ್ಲಿ ಐಸಿಸ್‌ ಶಿಬಿರ; ಹಿಂದೂ ನಾಯಕರ ಹತ್ಯೆಗೆ ಪ್ಲಾನ್!

Oct 5, 2020, 11:24 AM IST

ಬೆಂಗಳೂರು (ಅ. 05): ಕರ್ನಾಟಕದಲ್ಲಿಯೂ ಐಸಿಎಸ್ ಉಗ್ರರ ಆಟ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ. ನೆಮ್ಮದಿಯಾಗಿದ್ದ ಕರ್ನಾಟಕದ ಮೇಲೆಯೂ ಉಗ್ರರ ಕಣ್ಣು ಬಿದ್ದಿದೆ. ಅಲ್‌ ಹಿಂದ್‌ ಉಗ್ರರು ಕರ್ನಾಟಕದ ಕೊಡಗು, ಕೋಲಾರ ಮತ್ತು ಇತರೆ ಕೆಲ ಪ್ರದೇಶಗಳು, ಕೇರಳ, ಮಹಾರಾಷ್ಟ್ರದ ರತ್ನಗಿರಿ, ಗುಜರಾತ್‌ನ ಜಂಬೂಸರ್‌, ಆಂಧ್ರದ ಚಿತ್ತೂರ್‌, ಪಶ್ಚಿಮ ಬಂಗಾಳದ ಬುದ್ರ್ವಾನ್‌ನಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿಕೊಳ್ಳಲು ಯೋಜಿಸಿದ್ದರು.

ಗುಂಡ್ಲುಪೇಟೆ, ಶಿವನಸಮುದ್ರದಲ್ಲಿ ಐಸಿಸ್ ಉಗ್ರ ಶಿಬಿರ!

ಜೊತೆಗೆ ಕರ್ನಾಟಕದ ಮಂಡ್ಯ ಜಿಲ್ಲೆಯ ಶಿವನಸಮುದ್ರ ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಅರಣ್ಯದಲ್ಲಿ ಜಂಗಲ್‌ ತರಬೇತಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ಸಜ್ಜಗೊಳಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಹಿಂದೂ ಧಾರ್ಮಿಕ ನಾಯಕರು, ರಾಜಕೀಯ ನಾಯಕರು, ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಖ್ಯಾತನಾಮರನ್ನು ಹತ್ಯೆ ಮಾಡಲು ಪ್ಲಾನ್‌ ಕೂಡಾ ಮಾಡಿದ್ದರು ಎನ್ನಲಾಗಿದೆ. ಏನಿವರ ಸ್ಕೆಚ್? ಹೇಗಿತ್ತು ಪ್ಲಾನ್? ಇಲ್ಲಿದೆ ನೋಡಿ!