ಸಂಜನಾ ಬಿಡುಗಡೆ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಮತ್ತೊಂದು ಬಾಂಬ್
ಸ್ಯಾಂಡಲ್‌ವುಡ್ ಡ್ರಗ್ಸ್ ಡೀಲ್ ಬಗ್ಗೆ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿ ಸುದ್ದಿಯಾಗಿದ್ದ ಇಂದ್ರಜಿತ್ ಲಂಕೇಶ್ ಇದೀಗ ಮತ್ತೆ ಡ್ರಗ್ಸ್ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು (ಡಿ. 18): ಸ್ಯಾಂಡಲ್‌ವುಡ್ ಡ್ರಗ್ಸ್ ಡೀಲ್ ಬಗ್ಗೆ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿ ಸುದ್ದಿಯಾಗಿದ್ದ ಇಂದ್ರಜಿತ್ ಲಂಕೇಶ್ ಇದೀಗ ಮತ್ತೆ ಡ್ರಗ್ಸ್ ಬಗ್ಗೆ ಮಾತನಾಡಿದ್ದಾರೆ.
'ಕೋಡಿಹಳ್ಲಿ ನಕಲಿ ರೈತ ಹೋರಾಟಗಾರ, ಸಾರಿಗೆ ಹೋರಾಟಗಾರನ ಅಸಲಿ ಕತೆ ಬಿಚ್ಚಿಡ್ತೀನಿ'
ಶಕೀಲ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಡ್ರಗ್ಸ್ ಪ್ರಕರಣವನ್ನ ಎರಡು ರೀತಿ ನೋಡಬಹುದು. ಮೊದಲು ಈ ಪ್ರಕರಣ ಹೊರಗೆ ಬಂದಾಗ ಕೆಲವರು ಒಪ್ಪಿಕೊಂಡಿರಲಿಲ್ಲ. ಈಗ ಹಲವರು ಅರೆಸ್ಟ್ ಆಗಿದ್ದಾರೆ. ಈಗ ನಾನು ಮಾತನಾಡಿದ್ದು ಯಾಕೆ ಅಂತ ಅವರಿಗೆಲ್ಲಾ ಅರ್ಥ ಆಗಿದೆ. ಈ ಪ್ರಕರಣದಿಂದ ಒಂದು ಮೆಸೇಜ್ ಸಿಕ್ಕಿದೆ. ಬರೀ ನಟಿಯರು ಮಾತ್ರಾನಾ ತೆಗೆದುಕೊಳ್ಳುವುದು? ನಟರು ತೆಗೆದುಕೊಳ್ಳುವುದಿಲ್ವಾ? ಅಂತ ಕೆಲವರು ಕೇಳುತ್ತಿದ್ದಾರೆ. ನಾನು ಕೂಡಾ ಅದನ್ನೇ ಕೇಳುತ್ತೇನೆ. ಡ್ರಗ್ ಹಿನ್ನೆಲೆ, ಇತಿಹಾಸ ಇರುವಂತವರನ್ನ ಯಾಕೆ ಅರೆಸ್ಟ್ ಮಾಡಿಲ್ಲ? ಎಂದು ಡ್ರಗ್ಸ್ ಪ್ರಕರಣದ ತನಿಖೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.