ಆಕೆಗೆ ತಮ್ಮನಿಗಿಂತ ಇನಿಯನೇ ಹೆಚ್ಚು, ರಾತ್ರಿ ಕೊಂದು ಬೆಳಗ್ಗೆ ನೌಟೋಂಕಿ ಆಟವಾಡಿದ್ಲು..!

ಹುಟ್ಟುತ್ತಾ ಅಣ್ಣ ತಮ್ಮಂದಿರು... ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಇದು ನಿಜವಾಗಿರೋ ಘಟನೆಗಳನ್ನ ನಾವು ಎಷ್ಟೋ ನೋಡಿಬಿಟ್ಟಿದ್ದೇವೆ. ಇಲ್ಲಿಯೂ ಅಗಿದ್ದು ಅದೇ ಕತೆ. ತಾಲೂಕಿನ ನೂಲ್ವಿ ಗ್ರಾಮದಿಂದ ಲಕ್ಷ್ಮೇಶ್ವರಕ್ಕೆ ಹೋಗುವ ಮಾರ್ಗದ ಸೊಸೈಟಿ ಪ್ರದೇಶದಲ್ಲಿ ನೂಲ್ವಿಯ ಶಂಭು ಕಮಡೊಳ್ಳಿ (34) ಎಂಬಾತನ ಕೊಲೆಯಾಗುತ್ತದೆ. 

First Published May 19, 2022, 5:10 PM IST | Last Updated May 19, 2022, 5:10 PM IST

ಹುಬ್ಬಳ್ಳಿ (ಮೇ. 19): ಹುಟ್ಟುತ್ತಾ ಅಣ್ಣ ತಮ್ಮಂದಿರು... ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಇದು ನಿಜವಾಗಿರೋ ಘಟನೆಗಳನ್ನ ನಾವು ಎಷ್ಟೋ ನೋಡಿಬಿಟ್ಟಿದ್ದೇವೆ. ಇಲ್ಲಿಯೂ ಅಗಿದ್ದು ಅದೇ ಕತೆ. ತಾಲೂಕಿನ ನೂಲ್ವಿ ಗ್ರಾಮದಿಂದ ಲಕ್ಷ್ಮೇಶ್ವರಕ್ಕೆ ಹೋಗುವ ಮಾರ್ಗದ ಸೊಸೈಟಿ ಪ್ರದೇಶದಲ್ಲಿ ನೂಲ್ವಿಯ ಶಂಭು ಕಮಡೊಳ್ಳಿ (34) ಎಂಬಾತನ ಕೊಲೆಯಾಗುತ್ತದೆ. ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ, ಸ್ವಂತ ಅಕ್ಕ ನ್ನೋದು ವಿಪರ್ಯಾಸ.  ಅಕ್ಕ ಬಸವ್ವ ಜತೆಗೆ ಚನ್ನಪ್ಪಗೌಡ ಎಂಬಾತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.  

ಅಕ್ರಮ ಸಂಬಂಧ ವಿಚಾರ ಗೊತ್ತಿದ್ದ ಶಂಭುಲಿಂಗ ಈ ಬಗ್ಗೆ ಅಸಮಾಧಾನ ಹೊಂದಿದ್ದ ಅಲ್ಲದೆ, ಹಲವೆಡೆ ಇಬ್ಬರಿಗೂ ಬೈದಾಡಿಕೊಂಡು ತಿರುಗಾಡುತ್ತಿದ್ದ. ಇದರಿಂದ ಸಿಟ್ಟಾಗಿದ್ದ ಬಸವ್ವ ಆತನನ್ನು ಕೊಂದರೆ ತಾವು ನೆಮ್ಮದಿಯಿಂದ ಇರಬಹುದು ಎಂದು ಚನ್ನಪ್ಪನಿಗೆ ಹೇಳಿದ್ದಾಳೆ. ಹೀಗಾಗಿ ಚನ್ನಪ್ಪ ಮೇ 13ರ ರಾತ್ರಿ ಶಂಭುಲಿಂಗನನ್ನು ಅಡ್ಡಗಟ್ಟಿಎದೆ, ಕುತ್ತಿಗೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಹೇಗಿತ್ತು ಇವರ ಮಾಸ್ಟರ್ ಪ್ಲ್ಯಾನ್ ನೀವೇ ನೋಡಿ. 

Video Top Stories