Asianet Suvarna News Asianet Suvarna News

'ಪತ್ನಿಗೆ ಹಲವರ ಜತೆ ಸಂಬಂಧವಿದೆ' IPS ಪತ್ನಿಯ ವಿಚಾರ ಬಿಚ್ಚಿಟ್ಟ ಗಂಡ!

* ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನಲ್ಲಿ ನನ್ನ ಪತ್ನಿಯ ಕೈವಾಡವಿದೆ
* ಅನುರಾತ್ ತಿವಾರಿ ಮನೆಗೆ ನನ್ನ ಹೆಂಡತಿ ಪದೇ ಪದೇ ಹೋಗುತ್ತಿದ್ದಳು
* ಸಿಎಸ್‌ಗೆ ಬರೆದ ಪತ್ರದಲ್ಲಿ ಐಎಫ್‌ಎಸ್ ಅಧಿಕಾರಿ ಆರೋಪ
* ಈ ಬಗ್ಗೆ ಪ್ರತಿಕ್ರಿಯೆ ನೀಡಿರುವವ ವರ್ತಿಕಾ

ಬೆಂಗಳೂರು(ಸೆ. 02)  ಗಂಡ-ಹೆಂಡತಿ ಜಗಳಕ್ಕೂ ಐಎಎಸ್ ಅಧಿಕಾರಿ ಸಾವಿಗೂ ಸಂಬಂಧ ಇದೇಯಾ? ಅಂಥದ್ದೋಂದು ಅಂಶ ಇದೀಗ ಬಹಿರಂಗವಾಗಿದೆ. ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನಲ್ಲಿ ನನ್ನ ಪತ್ನಿ ಕೈವಾಡವಿದೆ? ಎಂದು  IPS ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಪತಿ ವಿದೇಶಾಂಗ ಇಲಾಖೆಯಲ್ಲಿ ಉಪಕಾರ್ಯದರ್ಶಿ ಆಗಿರುವ ನಿತಿನ್ ಸುಭಾಷ್  ಆರೋಪ ಮಾಡಿದ್ದಾರೆ.

ಐಪಿಎಸ್ ಅಧಿಕಾರಿಗೆ ವರದಕ್ಷಿಣೆ ಕಿರುಕುಳ

ಪತಿ ವಿರುದ್ಧ ವರ್ತಿಕಾ ವರದಕ್ಷಿಣೆ ಕಿರುಕುಳ ದೂರು  ನೀಡಿದ್ದರು. ಪತಿ-ಪತ್ನಿ ನಡುವಿನ ಸಾಂಸಾರಿಕ ಕಲಹ ಇದೀಗ ಬೀದಿಗೆ ಬಂದಿದೆ. ಲಾಕ್ ಡೌನ್ ವೇಳೆ ಪತಿ ನನ್ನ ಮೇಲೆ ಆಸಿಡ್ ಎರಚಲು ಯತ್ನಿಸಿದ್ದರು ಎಂದು ವರ್ತಿಕಾ ಆರೋಪಿಸಿದ್ದರು. 

Video Top Stories