ಪತ್ನಿಯ ಚುಡಾಯಿಸಿದವನ ಪ್ರಶ್ನಿಸಿದ ಗಂಡನ ಬರ್ಬರ ಹತ್ಯೆ!

ಕಳೆದ ಕೆಲ ದಿನಗಳಿಂದ ಪತ್ನಿಯನ್ನು ಚುಡಾಯಿಸುತ್ತಿದ್ದ ಕಾರಣಕ್ಕೆ ಆರೋಪಿ ಪ್ರಶಾಂತ್‌ನನ್ನು ಪತಿ ಮಾರುತಿ ಪ್ರಶ್ನಿಸಿದ್ದಾನೆ. ಇದೇ ಮಾರುತಿ ಜೀವಕ್ಕೆ ಕುತ್ತಾಗಿದೆ.

First Published Oct 31, 2022, 7:21 PM IST | Last Updated Oct 31, 2022, 7:21 PM IST

ಬೆಳಗಾವಿ(ಅ.31): ಹೆಂಡತಿಯನ್ನು ಚುಡಾಯಿಸುತ್ತಿದ್ದವನ ಪ್ರಶ್ನಿಸಿದ್ದಕ್ಕೆ ಗಂಡನ ಬರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರದ ಬಾಹೇರ್ ಗಲ್ಲಿಯಲ್ಲಿ ನಡೆದಿದೆ. ಖಾನಾಪುರ ಪಟ್ಟಣದ ನಿವಾಸಿ ಮಾರುತಿ ಜಾಧವ್(40) ತನ್ನ ಪತ್ನಿಯನ್ನು ಚುಡಾಯಿಸುತ್ತಿದ್ದ  ಆರೋಪಿ ಪ್ರಶಾಂತ್‌ನನ್ನು ಪ್ರಶ್ನಿಸಿದ್ದಾನೆ. ಇಷ್ಟೇ ಅಲ್ಲ ಈ ರೀತಿ ನಡವಳಿ ಉತ್ತಮವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ  ಪ್ರಶಾಂತ್ ನಿನ್ನೆ(ಅ.30) 11.30ರ ಸುಮಾರಿ ಕಟ್ಟಿಗೆಯಿಂದ ಹೊಡೆದು ಬಳಿಕ ಹರಿತವಾದ ಆಯುಧದಿಂದ ಇರಿದು ಕೊಲೆಗೈಯಲಾಗಿದೆ  

Video Top Stories